ವಟಗಲ್‌ನಲ್ಲಿ ಗ್ರಾಮ ಚಲೋ ಅಭಿಯಾನದಲ್ಲಿ ಬಿಜೆಪಿಯ ರೈತ ಮೋರ್ಚಾದ ಮಾಜಿ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಪಾಟೀಲ್ ಗುಗೆಬಾಳ ಮಾತನಾಡಿದರು. ಗ್ರಾಪಂ ಸದಸ್ಯ ಆದನಗೌಡ, ಪ್ರಮುಖರಾದ ಜಗದೀಶಚಂದ್ರ ತಾತ ಹಾಲಪೂರ, ಮಲ್ಲನಗೌಡ ಪಾಟೀಲ್, ಬಸನಗೌಡ ಸಿಂದನೂರು, ಭರತ ಗೌಡ, ರೆಡ್ಡೆಪ್ಪ ನಾಡಗೌಡ, ಲಿಂಗರಾಜ ಯೇಲರಿ, ರುದ್ರಗೌಡ, ಮಲ್ಲಿಕಾರ್ಜು ನಗೌಡ, ಅಮರೇಶ ನಾಯಕ ಉಪಸ್ಥಿತರಿದ್ದರು. 
ಜಿಲ್ಲೆ

ಪಕ್ಷಕ್ಕೆ ಕಾರ್ಯಕರ್ತರು ಜೀವಾಳ

ಪ್ರವೀಣ ಉದುಸಾ ದಲಬಂಜನ್

ಕವಿತಾಳ: ಮತ್ತೊಮ್ಮೆ ನರೇಂದ್ರ ಮೋದಿ ಅವರ ಪ್ರಧಾನಿಯಾಗಲಿ ಎಂಬುದು ದೇಶದ ಜನತೆಯ ಆಶಯವಾಗಿದೆ ಎಂದು ಬಿಜೆಪಿಯ ರೈತ ಮೋರ್ಚಾದ ಮಾಜಿ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಪಾಟೀಲ್ ಗುಗೆಬಾಳ ಹೇಳಿದರು.

ವಟಗಲ್‌ನಲ್ಲಿ ಗ್ರಾಮ ಚಲೋ ಅಭಿಯಾನದಲ್ಲಿ ಶನಿವಾರ ಮಾತನಾಡಿದರು. ಕಿಸಾನ್ ಸಮ್ಮಾನ್, ಆಯುಷ್ಮಾನ್ ಭಾರತ, ಸುಕನ್ಯಾ ಸಮೃದ್ಧಿ ಯೋಜನೆಗಳನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು. ಯೋಜನೆ ಕುರಿತು ಜನರಿಗೆ ಕಾರ್ಯಕರ್ತರು ಮಾಹಿತಿ ನೀಡಬೇಕು. ಲೋಕಸಭೆಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸಬೇಕು. ಪಕ್ಷಕ್ಕೆ ಕಾರ್ಯಕರ್ತರು ಜೀವಾಳವಿದ್ದಂತೆ ಎಂದರು.