ಜಿಲ್ಲೆ

ಕಾಲದ ಓಘಕ್ಕೆ ಅನುಗುಣವಾಗಿ ಬರವಣಿಗೆ: ಡಾ.ಬಿಳಿಮಲೆ ಅಭಿಮತ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಮಂಜೇಶ್ವರ

ಭಾವನೆಗಳಿಗೆ ಅನುಗುಣವಾಗಿ ಭಾಷೆಯನ್ನು ಹೊಸತುಗೊಳಿಸಬೇಕು. ಕಾಲದ ಓಘಕ್ಕೆ ಅನುಗುಣವಾಗಿ ಬರವಣಿಗೆಗಳು ಬದಲಾಗಬೇಕು. ಕವನಗಳು ಓದುವಾಗ ಪ್ರಶ್ನೆಗಳು ಮೂಡಬೇಕು. ಕಾವ್ಯದ ಮಾತು ಧ್ವನಿಯಾಗಬೇಕು ಎಂದು ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.

ಬೆಂಗಳೂರಿನ ರಂಗಮಂಡಲ ಹಾಗೂ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಸ್ಮಾರಕ ಗಿಳಿವಿಂಡು ಆಶ್ರಯದಲ್ಲಿ ಭಾನುವಾರ ಗಿಳಿವಿಂಡು ಆವರಣದಲ್ಲಿ ಕಾವ್ಯ ಸಂಸ್ಕೃತಿ ಯಾನ 11ನೇ ಕವಿಗೋಷ್ಠಿ ಸಮಾರಂಭದ ಉದ್ಘಾಟನಾ ಸಮಾರಂಭದಲ್ಲಿ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಾಧ್ಯಾಪಕಿ ಡಾ.ಕೆ.ವಿ.ಸಿಂಧೂ ಸಮಾರಂಭ ಉದ್ಘಾಟಿಸಿದರು. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಕಬೈಲು ಸತೀಶ ಅಡಪ, ಕರ್ನಾಟಕ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಉದ್ಯಮಿ ಗೋಪಾಲ ಶೆಟ್ಟಿ ಅರಿಬೈಲು ಉಪಸ್ಥಿತರಿದ್ದರು.

ಡಾ.ಪುರುಷೋತ್ತಮ ಬಿಳಿಮನೆ ದಂಪತಿಯನ್ನು ಸನ್ಮಾನಿಸಲಾಯಿತು. ಕಲಾವಿದೆ ನಿರ್ಮಲಾ ನಾದನ್ ಸರ್ವಾಧ್ಯಕ್ಷರನ್ನು ಪರಿಚಯಿಸಿದರು. ಡಿ.ಬಿ.ಮಲ್ಲಿಕಾರ್ಜುನ ಮಹಾಮನೆ ಪ್ರಾಸ್ತಾವಿಕ ಮಾತನಾಡಿದರು. ಎಂ.ಉಮೇಶ ಸಾಲ್ಯಾನ್ ಸ್ವಾಗತಿಸಿದರು. ರಾಧಾಕೃಷ್ಣ ಕೆ.ಉಳಿಯತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಪುರುಷೋತ್ತಮ ಭಟ್ ಕೆ. ವಂದಿಸಿದರು.

ಸಮಾರೋಪ ಸಮಾರಂಭ

ಸಂಜೆ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಸಮಾರೋಪ ನುಡಿಗಳನ್ನಾಡಿದರು. ಸರ್ವಾಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಮಂಜೇಶ್ವರ ಗ್ರಾಪಂ ಅಧ್ಯಕ್ಷೆ ಜೀನ್ ಲವೀನಾ ಮೊಂತೇರೊ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜು ಪ್ರಾಧ್ಯಾಪಕ ಪ್ರೊ.ಶಿವಶಂಕರ್, ಗೋವಿಂದ ಪೈ ಸ್ಮಾರಕ ಸಮಿತಿ ಸದಸ್ಯ ವಾಸುದೇವ, ಯಕ್ಷಗಾನ ಕಲಾವಿದ ನರಸಿಂಹ ಬಲ್ಲಾಳ್, ಡಾ.ಎಚ್.ಆರ್.ಸ್ವಾಮಿ, ಡಾ.ಪದ್ಮಾ ಶೈಲೇಂದ್ರ ಬಂದಗದ್ದೆ, ಡಿ.ಬಿ.ಮಲ್ಲಿಕಾರ್ಜುನ ಮಹಾಮನೆ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಉಮೇಶ ಎಂ.ಸಾಲಿಯಾನ್ ಉಪಸ್ಥಿತರಿದ್ದರು. ಕಮಲಾಕ್ಷ ಡಿ. ಸ್ವಾಗತಿಸಿದರು. ಕಮಲಾಕ್ಷ ಕನಿಲ ವಂದಿಸಿದರು. ಸಂತೋಷ್ ಕುಮಾರ್ ಕೆ. ನಿರೂಪಿಸಿದರು.