ಕುಶಾಲನಗರ:
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಮತ್ತು ಜಿಲ್ಲಾ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ವಸಂತ ಸಂಭ್ರಮದ ಸಿರಿ ಕವಿಗೋಷ್ಠಿ ಶನಿವಾರ ಕುಶಾಲನಗರದದಲ್ಲಿ ನಡೆಯಿತು. ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ಕವಿಗೋಷ್ಠಿ ಉದ್ಘಾಟಿಸಿದರು. ನಂತರ ಮಾತನಡಿದ ಅವರು, ಕವಿತೆಗಳ ರಚನೆಯ ಜತೆಯಲ್ಲಿ ಯುವ ಕವಿಗಳು ಓದುವಿಕೆಯ ಅಭ್ಯಾಸ ಮಾಡಿಕೊಂಡರೆ ಜ್ಞಾನದ ಬೆಳವಣಿಗೆಗೆ ಸಹಕಾರಿ ಆಗುತ್ತದೆ.
ಓದುವಿನ ಅರ್ಥೈಸುವಿಕೆ ಮೂಲಕ ಕವಿತೆಗಳನ್ನು, ಕಾವ್ಯಗಳನ್ನು ರಚಿಸಲು ಸಹಾಯವಾಗುತ್ತದೆ. ಸಾಹಿತ್ಯವನ್ನು ಗಂಭೀರವಾಗಿ ಸ್ವೀಕರಿಸಿ ಕ್ರಿಯಾಶೀಲವಾಗಿ ಅಭ್ಯಾಸ ಮಾಡಬೇಕು ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಹಡ್ರಂಗಿ ನಾಗರಾಜು, ಜಾನ್ ಮಾತಾನಾಡಿದರು.
ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನಿರ್ದೇಶಕ ಎಂ. ಧನಂಜಯ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ತಮ್ಮಯ್ಯ, ನಿವೃತ್ತ ಕಲಾ ಶಿಕ್ಷಕ ಊ. ರಾ. ನಾಗೇಶ್, ನಿವೃತ್ತ ಉಪನ್ಯಾಸಕ ಸಬಲಂ ಬೋಜಣ್ಣ ರೆಡ್ಡಿ, ಬಳಗದ ಪ್ರಮುಖರಾದ ಕೆ.ಕೆ. ನಾಗರಾಜ ಶೆಟ್ಟಿ, ಹೇಮಂತ್ ಪಾರೇರಾ, ಶರ್ಮಿಳಾ ರಮೇಶ್, ರಾಣಿ ರವೀಂದ್ರ ಮತ್ತಿತರರು ಇದ್ದರು. ಜಿಲ್ಲೆಯ 30 ಕ್ಕೂ ಹೆಚ್ಚು ಕವಿಗಳು ಸ್ವ ರಚಿತ ಕವನಗಳನ್ನು ವಾಚಿಸಿದರು.