ಕುಶಾಲನಗರ:
ಶುಕ್ರವಾರದಿಂದ (ಅ.24) ತಲಕಾವೇರಿ ಕ್ಷೇತ್ರದಿಂದ ಆರಂಭಗೊಳ್ಳಲಿರುವ 15ನೇ ವರ್ಷದ ತಲಕಾವೇರಿ - ಪೂಂಪ್ ಹಾರ್ ಕಾವೇರಿ ಜಾಗೃತಿ ರಥಯಾತ್ರೆಯಲ್ಲಿ ಪಾಲ್ಗೊಳ್ಳಲು ಅಖಿಲ ಭಾರತೀಯ ಸನ್ಯಾಸಿಗಳ ಸಂಘದ ಪ್ರಮುಖರು ಗುರುವಾರ ಜಿಲ್ಲೆಗೆ ಆಗಮಿಸಿದರು.
ಅಖಿಲ ಭಾರತೀಯ ಸನ್ಯಾಸಿ ಸಂಘ ಸ್ಥಾಪಕ ಶ್ರೀ ರಮಾನಂದ ಮಹಾರಾಜ ನೇತೃತ್ವದಲ್ಲಿ ಆಗಮಿಸಿದ ಸನ್ಯಾಸಿಗಳ ತಂಡವನ್ನು ಕುಶಾಲನಗರ ಕೊಪ್ಪ ಗಡಿಭಾಗದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಪ್ರಮುಖರು ಬರಮಾಡಿಕೊಂಡರು.
ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿದ ಸಾಧುಸಂತರ ತಂಡ ನಂತರ ತಲಕಾವೇರಿಗೆ ತೆರಳಿತು. ಶುಕ್ರವಾರ ಬೆಳಗ್ಗೆ 9 ಗಂಟೆಗೆ ತಲಕಾವೇರಿ ಕ್ಷೇತ್ರದಲ್ಲಿ ಯಾತ್ರೆಗೆ ಚಾಲನೆ ದೊರೆಯಲಿದೆ.