ಕಿನ್ನಿಗೋಳಿ: ಭಕ್ತರು ಕೈ ಜೋಡಿಸಿದಾಗ ಯಾವುದೇ ಧಾರ್ಮಿಕ ಕಾರ್ಯ ಯಶಸ್ವಿಯಾಗಲು ಸಾಧ್ಯ. ಕವತ್ತಾರು ದೇವಸ್ಥಾನಕ್ಕೆ ಲಕ್ಷಾಂತರ ಜನ ಭಕ್ತರು ಇದ್ದು, ಭಕ್ತರ ಸಹಕಾರದಿಂದ ಜೀರ್ಣೋದ್ಧಾರ ಕಾರ್ಯ ಸುಗಮವಾಗಿ ಸಾಗುವುದು ಎಂದು ಕಟೀಲು ದೇಗುಲದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಕವತ್ತಾರು ಆದಿ ಆಲಡೆಯ ಸಿರಿ ಅಬ್ಬಗ ದಾರಗ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ನಾಗ ಪ್ರತಿಷ್ಠಾಪನೆ ಮತ್ತು ಮುಷ್ಟಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವರಿಗೆ ಮುಷ್ಟಿ ಕಾಣಿಕೆ ಮತ್ತು ನಾಗಪ್ರತಿಷ್ಠಾಪನೆ ನಡೆಯಿತು. ವೇದವ್ಯಾಸ ತಂತ್ರಿ, ದೇಗುಲದ ಪ್ರಧಾನ ಅರ್ಚಕ ದೇಂದಡ್ಕ ವಿಷ್ಣುರಾಜ್ ಭಟ್, ದೇವೇಶ್ ಭಟ್, ವಿಶ್ವೇಶ ಭಟ್ ಸುರಗಿರಿ, ದೇಗುಲದ ಆಡಳಿತ ಮೊಕ್ತೇಸರ ನೀನಾ ನಿತ್ಯಾನಂದ ಅಜಿಲ, ನಿತ್ಯಾನಂದ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷೆ ಬಳ್ಕುಂಜೆಗುತ್ತು ಮಲ್ಲಿಕಾ ಯಶವಂತ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಬಳ್ಕುಂಜೆ, ಅಶೋಕ್ ಶೆಟ್ಟಿ ಕವತ್ತಾರು ಸುದೀಪ್ ಅಜಿಲ, ಬಳ್ಕುಂಜೆ ಬಂಡಸಾಲೆ ಯೋಗೀಶ್ವರ ಕೆ.ಶೆಟ್ಟಿ, ಶರತ್ ಅಜಿಲ, ಗುತ್ತಿನಾರ್ ಸುಧಾಕರ ಶೆಟ್ಟಿ, ರಾಮದಾಸ್ ಶೆಟ್ಟಿ ಬಾಳಿಕೆಮನೆ, ಕೃಷ್ಣ ಶೆಟ್ಟಿ ಕಾಡಬರಿ, ಪ್ರಸಾದ್ ಅಜಿಲ ಮತ್ತಿತರರಿದ್ದರು.