ಕವಲೂರು ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ಭಾವಚಿತ್ರದ ಮೆರವಣಿಗೆ ನಡೆಯಿತು. ಪ್ರಮುಖರಾದ ನಾಗರಾಜ, ಸುರೇಶ, ದೇವಪ್ಪ, ಹನುಮಂತ, ಬಾಳಪ್ಪ, ವೆಂಕಟೇಶ, ಮಂಜುನಾಥ, ಪ್ರಕಾಶ ಸಂತೋಷ, ಹನುಮಂತ, ಪಕೀರೇಶ, ವಿಜಯ, ಗವಿ ಇತರರಿದ್ದರು. 
ಜಿಲ್ಲೆ

ರಾಮಾಯಣದಿಂದ ಸಮಾಜಕ್ಕೆ ಶಾಂತಿ ಸಂದೇಶ

ಶ್ರೀನಾಥ

ಕವಲೂರು: ಜೀವನದ ದಾರಿದೀಪವಾಗಿರುವ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣದ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ನಾಗರಾಜ ಕಗ್ಗಲ್ ತಿಳಿಸಿದರು.

ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಸಂಘ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ 15ನೇ ವರ್ಷದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ರಾಮಾಯಣವು ಸಮಾಜಕ್ಕೆ ಶಾಂತಿ, ಶ್ರೇಯಸ್ಸನ್ನು ತರುವ ಮಹಾ ಗ್ರಂಥವಾಗಿದೆ. ಮಾನವನ ಬದುಕಿಗೆ ಬೇಕಾದ ಉತ್ತಮ ಸಂದೇಶ ಹಾಗೂ ಮಾರ್ಗದರ್ಶನ ನೀಡುವ ಮಹಾಕಾವ್ಯ ಆಗಿದೆ. ಯುವಕರು ವಾಲ್ಮೀಕಿ ಮಹರ್ಷಿ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಸುರೇಶ ವಾಸ್ತೆ ಮಾತನಾಡಿ, ವಿಶ್ವದ ಮೊದಲ ಮಹಾಕಾವ್ಯ ರಚಿಸಿದ ವಾಲ್ಮೀಕಿ ಅವರನ್ನು ಆದಿಕವಿ ಎಂದು ಕರೆಯುತ್ತಾರೆ.

ಅವರ ನೀತಿ-ತತ್ವಗಳನ್ನು ಜಯಂತಿ ದಿನ ಮಾತ್ರ ನೆನೆಯದೇ ಜೀವನಪೂರ್ತಿ ಸ್ಮರಿಸಬೇಕು. ವಾಲ್ಮೀಕಿ ಬೋಧನೆಗಳು ರಾಮನ ಮೌಲ್ಯಗಳನ್ನು, ಸತ್ಯ, ಕರ್ತವ್ಯಗಳನ್ನು ಒತ್ತಿ ಹೇಳುತ್ತವೆ. ಎಲ್ಲರೂ ಅವರ ಆದರ್ಶಗಳನ್ನು ಪಾಲಿಸೋಣ ಎಂದರು.

ಜಯಂತಿ ನಿಮಿತ್ತ ಬೆಳಗ್ಗೆ ಮಹರ್ಷಿ ವಾಲ್ಮೀಕಿ ಮೂರ್ತಿಗೆ ರುದ್ರಾಭಿಷೇಕದೊಂದಿಗೆ ವಿಶೇಷಪೂಜೆ ಸಲ್ಲಿಸಲಾಯಿತು. ಅಲಂಕೃತ ತೆರೆದ ವಾಹನದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಪ್ರಮುಖರಾದ ದೇವಪ್ಪ ಹಳ್ಳಿ, ಹನುಮಂತ ಕೊರ್ಲಗಟ್ಟಿ, ಬಾಳಪ್ಪ ನಾಯಕ, ವೆಂಕಟೇಶ, ಮಂಜುನಾಥ, ಪ್ರಕಾಶ, ಸಂತೋಷ, ಹನುಮಂತ, ಫಕಿರೇಶ, ವಿಜಯ, ಗವಿ, ಬದ್ರುದ್ದೀನ್, ಮಹಾಂತೇಶ ಸಿಂದೋಗಿ ಇತರರಿದ್ದರು.