ಕವಲೂರು ಗ್ರಾಮದ ನರೇಗಾ ಕಾಮಗಾರಿ ಸ್ಥಳದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಉಚಿತ ಶಿಬಿರ ಉದ್ದೇಶಿಸಿ ಜಿಲ್ಲಾ ಆಯುಷ್‌ಅಧಿಕಾರಿ ಪರ್ವತಗೌಡ ಹಿರೇಗೌಡ್ರ ಮಾತನಾಡಿದರು. ಪಿಡಿಒ ಅನಿತಾ, ಕಾರ್ಯದರ್ಶಿ ಸಣ್ಣಜಂಬಣ್ಣ, ವೈದ್ಯರಾದ ಮುತ್ತು ಹಡಪದ, ಗಾನಶ್ರೀ ಇತರರಿದ್ದರು. 
ಜಿಲ್ಲೆ

ಆರೋಗ್ಯಕರ ಜೀವನಕ್ಕೆ ನಿತ್ಯ ಯೋಗ ಮಾಡಿ

ಕವಲೂರು: ಖುಷಿಯಿಂದ ಜೀವನ ನಡೆಸಬೇಕೆಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಪರ್ವತಗೌಡ ಹಿರೇಗೌಡ್ರ ತಿಳಿಸಿದರು.

ಗ್ರಾಮದಲ್ಲಿ ಜಿಲ್ಲಾ ಆಯುಷ್ ಇಲಾಖೆ, ಗ್ರಾಮ ಪಂಚಾಯಿತಿ ಕವಲೂರು ಹಾಗೂ ಮುಂಡರಗಿಯ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಆಯುರ್ವೆದಿಕ್ ಮಹಾವಿದ್ಯಾಲದಿಂದ ಮಂಗಳವಾರ ನರೇಗಾ ಕಾಮಗಾರಿ ಸ್ಥಳದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಉಚಿತ ಶಿಬಿರ ಹಾಗೂ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ದುಶ್ಚಟಗಳು ಜೀವನವನ್ನು ಹಾಳು ಮಾಡಿ, ಸಂಸಾರದಲ್ಲಿ ಗೊಂದಲವನ್ನು ಉಂಟು ಮಾಡಿ ಮಾನಸಿಕ ನೆಮ್ಮದಿ ನೆಡಿಸುತ್ತವೆ. ಆರೋಗ್ಯಕರ ಜೀವನಕ್ಕೆ ನಿತ್ಯ ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು. ಪಿಡಿಒ ಅನಿತಾ ಕಿಲ್ಲೇದ ಮಾತನಾಡಿ, ಜನ ಸಾಮಾನ್ಯರಿಗೂ ತಮ್ಮ ಕಾಯಿಲೆ ಬಗ್ಗೆ ತಿಳಿಯಲು ಹಾಗೂ ಉತ್ತಮ ಚಿಕಿತ್ಸೆ ದೊರೆಯಬೇಕಾದರೆ ಇಂತಹ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಕಾರ್ಯದರ್ಶಿ ಸಣ್ಣಜಂಬಣ್ಣ, ವೈದ್ಯರಾದ ಪ್ರಿಯಾ, ಅನಿತಾ, ಅಪೂರ್ವಾ, ಮುಸ್ಕಾನಾ, ಸುಯೇಶ, ಕಿಶೋರ ಮತ್ತಿತರರಿದ್ದರು.