ಜಿಲ್ಲೆ

ಶಿಸ್ತು, ನಿರಂತರ ಕಲಿಕೆಯಿಂದ ಸಾಧನೆ ಸಾಧ್ಯ

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿದ್ಯಾರ್ಥಿಗಳು ಉನ್ನತ ಗುರಿ ಇಟ್ಟುಕೊಳ್ಳಬೇಕು. ಶಿಸ್ತು, ನಿರಂತರ ಕಲಿಕೆಯಿಂದ ಸಾಧನೆ ಸಾಧ್ಯ ಎಂದು ಐಪಿಎಸ್ ಅಽಕಾರಿ ಅನಿತಾ ಬಿ. ಹದ್ದಣ್ಣನವ ಹೇಳಿದರು.

ನಗರದ ಕರ್ನಾಟಕ ವಿಶ್ವವಿದ್ಯಾಲಯದ ಕೌಸಾಳಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ಹಳೆಯ ವಿದ್ಯಾರ್ಥಿಗಳು ಇತ್ತೀಚೆಗೆ ಆಯೋಜಿಸಿದ್ದ ದರ್ಪಣ್- 2ಕೆ25 ಪುನರ್‌ಮಿಲನ ಮತ್ತು ಗುರುವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇನ್ನೋರ್ವ ಅತಿಥಿ ಸಾಸ್ಕೆನ್ ಟೆಕ್ನಾಲಜಿಯ ಗ್ಲೋಬಲ್ ಹೆಡ್ ಎಚ್‌ಆರ್ ಮೌಮಿತಾ ಕುರುಪ್ ಮಾತನಾಡಿ, ಪರಿಪೂರ್ಣತೆಯು ಒಂದು ಮಿಥ್ಯೆ. ನಿರಂತರ ಕಲಿಕೆ ಮಾತ್ರ ಸ್ಥಿರ ಎಂದರು.

2003- 05ನೇ ಬ್ಯಾಚ್‌ನ ವಿದ್ಯಾರ್ಥಿಗಳು ಡಾ. ಎಂ.ಎಸ್. ಸುಭಾಸ್, ಡಾ. ಎ.ಎಚ್. ಚಚಡಿ, ಡಾ. ಶಿವಪ್ಪ, ಡಾ. ಎಚ್.ಎನ್. ಶಿವಪ್ರಸಾದ್ ಮತ್ತು ಡಾ. ವಿಜಯಲಕ್ಷ್ಮೀ ಅಮ್ಮಿನಭಾವಿ ಅವರನ್ನು ಸನ್ಮಾನಿಸಿದರು.

ಪ್ರಭಾರ ಕುಲಪತಿ ಡಾ. ಜಯಶ್ರೀ ಎಸ್., ವಿಶ್ರಾಂತ ಕುಲಪತಿ ಪ್ರೊ. ಕೆ.ಬಿ. ಗುಡಸಿ, ಅಲುಮ್ನಿ ನೆಟ್‌ವರ್ಕ್ ಅಧ್ಯಕ್ಷ ನರೇಶ ಶಾ, ಉಪಾಧ್ಯಕ್ಷೆ ಸವಿತಾ ಸಮತ್, ಇತರರಿದ್ದರು.

ಮಹಿಳಾ ಸಬಲೀಕರಣ ವಿಷಯ ಕುರಿತು ಡಾ. ಉಮಾ ಶಶಿಕಾಂತ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ನಂತರ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡರು.