ಮಂಡ್ಯ: ತಾಲೂಕಿನ ಕಸಬಾ ಹೋಬಳಿ ಕಟ್ಟೆದೊಡ್ಡಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷೆಯಾಗಿ ರುಕ್ಮಿಣಿ ಹಾಗೂ ಉಪಾಧ್ಯಕ್ಷೆಯಾಗಿ ಕೆ.ವಿ.ಯಶೋಧಾ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷೆ ಸ್ಥಾನಕ್ಕೆ ರುಕ್ಮಿಣಿ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ಕೆ.ವಿ.ಯಶೋಧಾ ಅವರನ್ನು ಹೊರತುಪಡಿಸಿ ಮತ್ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಫಾತಿಮಾ ಅವಿರೋಧದ ಆಯ್ಕೆಯನ್ನು ಘೋಷಣೆ ಮಾಡಿದರು.
ನೂತನ ವರಿಷ್ಠರನ್ನು ನಿರ್ದೇಶಕಿಯರಾದ ಸುಧಾ, ಭಾಗ್ಯಮ್ಮ, ಯಶೋಧಮ್ಮ, ಲಕ್ಷ್ಮೀ, ವಿಶಾಲಾ, ಸುನಂದಮ್ಮ, ಬಿ.ಗೌಡಗೆರೆ ಗ್ರಾಪಂ ಮಾಜಿ ಅಧ್ಯಕ್ಷ ಕಟ್ಟೆದೊಡ್ಡಿ ಪುಟ್ಟಸ್ವಾಮಿ, ಮುಖಂಡರಾದ ಕೆ.ನಾಗರಾಜು, ಬೊಮ್ಮೇಗೌಡರ ಶಿವಲಿಂಗಯ್ಯ, ರಾಮಕೃಷ್ಣ, ಸುರೇಶ್, ಶ್ರೀಧರ್, ಪವನ್, ಕಾಳೇಗೌಡರ ಶಿವಲಿಂಗಯ್ಯ, ಅಭಿ, ಡಿ.ಎಲ್.ಶಿವಲಿಂಗಯ್ಯ, ಕೆ.ಜೆ.ಸುರೇಶ್ ಅಭಿನಂದಿಸಿದರು.