ಜಿಲ್ಲೆ

ಹಾನಗಲ್ಲ ಗಂಗಾಮತ ಕ್ಷೇಮಾಭಿವೃದ್ಧಿ ಸಂಘಕ್ಕೆ ಕಠಾರಿ ಅಧ್ಯಕ್ಷ

ಹಾನಗಲ್ಲ: ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕ ರಚಿಸಲಾಗಿದ್ದು, ಅಧ್ಯಕ್ಷರಾಗಿ ಎಸ್.ಎಫ್. ಕಠಾರಿ ಆಯ್ಕೆಯಾಗಿದ್ದಾರೆ.

ಪಟ್ಟಣದ ಗಂಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಸಂಘದ ತಾಲೂಕು ಘಟಕವನ್ನು ರಾಜ್ಯಾಧ್ಯಕ್ಷ ಎಂ. ಶ್ರೀನಿವಾಸ ಉದ್ಘಾಟಿಸಿದರು. ನಂತರ ಏರ್ಪಡಿಸಿದ್ದ ಸಭೆಯಲ್ಲಿ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರುಗಿತು.

ಹಾನಗಲ್ಲ ಘಟಕಕ್ಕೆ ಪ್ರಧಾನ ಕಾರ್ಯದರ್ಶಿಯಾಗಿ ಪ್ರಭು ನಿಂಬಕ್ಕನವರ, ಖಜಾಂಚಿಯಾಗಿ ಕರಬಸಪ್ಪ ರ್ಬಾ ಅವರನ್ನು ನೇಮಕ ಮಾಡಲಾಯಿತು. ಉಪಾಧ್ಯಕ್ಷರನ್ನಾಗಿ ಎಫ್.ಪಿ. ಚಿಕ್ಕಜ್ಜನವರ, ಎಲ್.ಆರ್. ರ್ಬಾ, ಜಿ.ಬಿ. ಕಳ್ಳಿಮನಿ, ಪ್ರದೀಪ ಗುಡ್ಡದ, ಸಂಘಟನಾ ಕಾರ್ಯದರ್ಶಿಯಾಗಿ ಪ್ರಶಾಂತ ಬಾನಣ್ಣನವರ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಾವಿತ್ರಿ ಗೊಂದಿ ಅವರನ್ನು ಆಯ್ಕೆ ಮಾಡಲಾಯಿತು.

ರಾಜ್ಯ ಘಟಕದ ಉಪಾಧ್ಯಕ್ಷ ಪ್ರೊ.ಎನ್.ಎಂ. ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ಹಾಲೇಶಪ್ಪ, ಖಜಾಂಚಿ ದತ್ತಾತ್ರೇಯ ಶಿಶಿಕರ್, ಸಂಘಟನಾ ಕಾರ್ಯದರ್ಶಿಗಳಾದ ರವಿಕುಮಾರ ಬಂಗೇರ, ವೆಂಕಟಸ್ವಾಮಿ, ಹಾವೇರಿ ಜಿಲ್ಲಾಧ್ಯಕ್ಷ ಸಂಜಯ ಸುಣಗಾರ, ಉಪಾಧ್ಯಕ್ಷ ಶಂಕರ ಸುತಾರ, ಧಾರವಾಡ ಜಿಲ್ಲಾಧ್ಯಕ್ಷ ಗುರು ಮತ್ತೂರು, ಹಾನಗಲ್ಲ ತಾಲೂಕು ಗಂಗಾಮತ ಸಂಘದ ಅಧ್ಯಕ್ಷ ಪ್ರದೀಪ ಶೇಷಗಿರಿ, ನಗರ ಘಟಕದ ಅಧ್ಯಕ್ಷ ಪರಶುರಾಮ ನಿಂಗೋಜಿ, ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ, ಸಮಾಜದ ಪ್ರಮುಖರಾದ ಚಂದ್ರಪ್ಪ ಜಾಲಗಾರ, ರಾಜೇಂದ್ರ ರ್ಬಾ, ನಾರಾಯಣ ಕಠಾರಿ, ಲೋಕೇಶ್ ಕುಂಡೋಜಿ, ಚಂದ್ರಕಾಂತ ಕುಂದೂರು, ಉಪಸ್ಥಿತರಿದ್ದರು. ಪ್ರಭು ನಿಂಬಕ್ಕನವರ ಮತ್ತು ಶಿವು ಪೂಜಾರ ನಿರ್ವಹಿಸಿದರು.