ಜಿಲ್ಲೆ

ಸೆ. 23, 24ರಂದು ಬಳ್ಳಾರಿಯಲ್ಲಿ ‘ಈ ಹೊತ್ತಿಗೆ’ ಕಥಾ ಕಮ್ಮಟ

ಬೆಂಗಳೂರು: ‘ಈ ಹೊತ್ತಿಗೆ’ ಓದುಗರ ವೇದಿಕೆ ತನ್ನ ದಶಮಾನೋತ್ಸವದ ನಿಮಿತ್ತ ಬಳ್ಳಾರಿಯ ಅರಿವು ಸಂಸ್ಥೆ ಮತ್ತು ಮರ್ಚೆಡ್ ಟ್ರಸ್ಟ್ ಸಹಯೋಗದಲ್ಲಿ ಸೆ. 23 ಮತ್ತು 24ರಂದು ಎರಡು ದಿನಗಳ ಕಾಲ ಕಥಾ ಕಮ್ಮಟವನ್ನು ಬಳ್ಳಾರಿಯ ಗುಗ್ಗರಹಟ್ಟಿಯಲ್ಲಿರುವ ಜ್ಞಾನಾಮೃತ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದೆ.

ಖ್ಯಾತ ಲೇಖಕಿ, ವಿಮರ್ಶಕಿ ಡಾ. ಎಂ.ಎಸ್. ಆಶಾದೇವಿ ಈ ಕಮ್ಮಟದ ನಿರ್ದೇಶಕಿಯಾಗಿದ್ದು, ಇದರಲ್ಲಿ ವಿವಿಧ ಜಿಲ್ಲೆಗಳ 37 ಕಥೆಗಾರರು, ಕಥಾಸಕ್ತರು, 7 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ಕಥೆಗಾರರು ಹಾಗೂ ವಿಮರ್ಶಕರಾದ ಎಸ್. ದಿವಾಕರ್, ಡಾ. ಅಮರೇಶ್ ನುಗಡೋಣಿ, ಜಯಶ್ರೀ ಕಾಸರವಳ್ಳಿ, ಪದ್ಮನಾಭ ಭಟ್, ಅನುಪಮಾ ಪ್ರಸಾದ್ ಭಾಗವಹಿಸಲಿದ್ದಾರೆ. ಡಾ. ಸುಮಾ ಗುಡಿ ಕಾರ್ಯಕ್ರಮ ನಿರೂಪಿಸಲಿದ್ದಾರೆ.

ಸೆ. 23ರಂದು ಬೆಳಗ್ಗೆ 9.30ಕ್ಕೆ ಬಳ್ಳಾರಿಯ ಲೋಹಿಯಾ ಪ್ರಕಾಶನದ ಸಿ. ಚೆನ್ನಬಸವಣ್ಣ, ಕಮ್ಮಟವನ್ನು ಉದ್ಘಾಟಿಸಲಿದ್ದಾರೆ. ‘ಈ ಹೊತ್ತಿಗೆ’ ಸಂಸ್ಥೆಯ ಸ್ಥಾಪಕಿ, ನಟಿ, ಲೇಖಕಿ ಜಯಲಕ್ಷ್ಮೀ ಪಾಟೀಲ್, ಅರಿವು ಸಂಸ್ಥೆಯ ಕಾರ್ಯದರ್ಶಿ ಡಾ. ಅರವಿಂದ ಪಟೇಲ್, ಮರ್ಚೆಡ್ ಟ್ರಸ್ಟ್‌ನ ಅಧ್ಯಕ್ಷ ಎಂ.ಜಿ. ಗೌಡ ಭಾಗವಹಿಸಲಿದ್ದಾರೆ. ಸೆ. 24ರಂದು ಸಂಜೆ ನಡೆಯಲಿರುವ ಸಮಾರೋಪ ಸಮಾರಂಧಲ್ಲಿ ಎಸ್. ದಿವಾಕರ್, ಕವಿ ಆರಿಫ್ ರಾಜ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.