ಜಿಲ್ಲೆ

ಕಟೀಲಿನಲ್ಲಿ ನಿಯಮ ಅನುಸರಿಸಿ ಪ್ರವೇಶ

Dakshina Kannada

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸೋಮವಾರದಿಂದ ಸರ್ಕಾರದ ಆದೇಶದಂತೆ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ ಯಾವುದೇ ಸೇವೆ ಇರುವುದಿಲ್ಲ. ಮೂರು ಹೊತ್ತು ಭಕ್ತರಿಗೆ ನೀಡುತ್ತಿದ್ದ ಅನ್ನಪ್ರಸಾದವೂ ಇರುವುದಿಲ್ಲ.

ಕೋವಿಡ್ ನಿಯಮ ಅನುಸರಿಸಿ ಭಕ್ತರಿಗೆ ದೇಗುಲ ಪ್ರವೇಶಕ್ಕೆ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಲಾಕ್‌ಡೌನ್ ಸಂದರ್ಭ ದೇವಳ ಪ್ರವೇಶ ನಿರಾಕರಿಸಲಾಗಿದ್ದರೂ, ದೇವಳದ ಹೊರಭಾಗದಿಂದಲೇ ಭಕ್ತರು ಪ್ರಾರ್ಥನೆ ಸಲ್ಲಿಸಿ ಹೋಗುತ್ತಿದ್ದರು. ಭಕ್ತರಿಗೆ ಕಳೆದ ಬಾರಿಯಂತೆ ಒಂದೇ ಸುತ್ತು ಪ್ರದಕ್ಷಿಣೆ ಬರಲು ಅವಕಾಶವಿದೆ. ಜನಸಂದಣಿ ಹೆಚ್ಚಾದರೆ ಸರದಿಯಲ್ಲಿ ಬರುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಅಂತರ ಕಾಯ್ದುಕೊಂಡು ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ದೇವಳ ಮೂಲಗಳು ತಿಳಿಸಿವೆ.

ಸೇವೆಗಳನ್ನು ನಡೆಸಲು ಅವಕಾಶ ಇಲ್ಲದಿರುವುದು ಭಕ್ತರ ಭಾವನೆಗೂ ಧಕ್ಕೆ ತರುತ್ತದೆ. ಮಕ್ಕಳಿಗೆ ಅನ್ನಪ್ರಾಶನ, ಹೂವಿನಪೂಜೆ, ರಂಗಪೂಜೆಯಂತಹ ಸೇವೆಗಳನ್ನು ಹರಕೆ ಹೊತ್ತ ಭಕ್ತರು ಸಲ್ಲಿಸಲು ಅವಕಾಶ ನೀಡಬೇಕಾಗಿದೆ. ಮುಂಬೈ, ಹೊರದೇಶದಿಂದಲೂ ಸೇವೆಗಳ ಬಗ್ಗೆ ವಿಚಾರಿಸಿ ಭಕ್ತರಿಂದ ಕರೆ ಬರುತ್ತಿದೆ. ದೇವಳ ನಡೆಸಲು ಆದಾಯದ ದೃಷ್ಟಿಯಿಂದಲೂ ಸೇವೆಗಳನ್ನು ಆರಂಭಿಸಬೇಕಾದ ಅಗತ್ಯವಿದ್ದು, ಎಲ್ಲ ದೇವಾಲಯಗಳಲ್ಲೂ ಸೇವೆಗೂ ಅವಕಾಶ ಒದಗಿಸಬೇಕು.

ಅನಂತಪದ್ಮನಾಭ ಆಸ್ರಣ್ಣ, ಪ್ರಧಾನ ಅರ್ಚಕರು ಶ್ರೀ ಕ್ಷೇತ್ರ ಕಟೀಲು