ಜಿಲ್ಲೆ

ಬ್ರಹ್ಮಕಲಶ ಮೂಲಕ ಶಾಂತಿ: ರಾಘವೇಶ್ವರ ಶ್ರೀ

ಕಟೀಲು: ಕಟೀಲು ದುರ್ಗೆಯ ಬ್ರಹ್ಮಕಲಶೋತ್ಸವ ಮೂಲಕ ಲೋಕದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿ ಎಂದು ಹೊಸನಗರ ರಾಮಚಂದ್ರಾಪುರ ಮಠ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನದ ಶ್ರೀ ರಾಘವೇಶ್ವರ ಭಾರತೀ ತೀರ್ಥ ಸ್ವಾಮೀಜಿ ಆಶಿಸಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಬ್ರಹ್ಮಕಲಶೋತ್ಸವದ ಅಂಗವಾಗಿ ಭ್ರಾಮರಿ ಸಭಾಂಗಣದಲ್ಲಿ ಹತ್ತನೇ ದಿನದ ಸಭಾ ಕಾರ್ಯ ಕ್ರಮದಲ್ಲಿ ಶುಕ್ರವಾರ ಆಶೀರ್ವಚನ ನೀಡಿದರು.

ಬಾರಕೂರು ಕಚ್ಚೂರು ಶ್ರೀ ನಾಗೇಶ್ವರ ದೇವಳದ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕಟೀಲು ದೇವಳಕ್ಕೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು.

ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳ ಅರ್ಚಕ ವಿಶ್ವೇಶ ಭಟ್ ಬೆಳ್ತಂಗಡಿ, ಕಾಶಿಪಟ್ನ ಪಂಚಲಿಂಗೇಶ್ವರ ದೇವಳ ಅರ್ಚಕ ಮತ್ತು ಆಡಳಿತ ಮೊಕ್ತೇಸರ ಕೇಳ ಅನಂತ ಆಸ್ರಣ್ಣ, ಕಟೀಲು ದೇವಳ ಆನುವಂಶಿಕ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ, ಆನುವಂಶಿಕ ಮೊಕ್ತೇಸರ ಹಾಗೂ ಆಡಳಿತ ಸಮಿತಿ ಅಧ್ಯಕ್ಷ ಸನತ್‌ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಬ್ರಹ್ಮಕಲಶೋತ್ಸವ ಪೂನಾ ಸಮಿತಿ ಹಾಗೂ ಬಂಟರ ಸಂಘ ಪೂನಾ ಅಧ್ಯಕ್ಷ ಇನ್ನ ಸಂತೋಷ್ ಶೆಟ್ಟಿ, ಪೂನಾ ಬಿಲ್ಲವ ಸಂಘ ಅಧ್ಯಕ್ಷ ವಿಶ್ವನಾಥ ಪೂಜಾರಿ ಕಡ್ತಲ, ಉದ್ಯಮಿಗಳಾದ ಎರ್ಮಾಳು ಎನ್.ಕೆ.ಶೆಟ್ಟಿ, ನಗ್ರಿಗುತ್ತು ರೋಹಿತ್ ಡಿ.ಶೆಟ್ಟಿ, ಪದ್ಮನಾಭ ಶೆಟ್ಟಿ, ಕಟೀಲು ಚಂದ್ರಶೇಖರ ಬಿ., ಎಲ್.ವಿ.ಅಮೀನ್, ಐಕಳ ವಿಶ್ವನಾಥ ಶೆಟ್ಟಿ, ಐಕಳ ಗಣೇಶ ಶೆಟ್ಟಿ, ಜಗನ್ನಾಥ ಶೆಟ್ಟಿ, ಮುಂಬೈ ಬೋರಿವಿಲಿ ದಯಾವತಿ ಮೆಂಡನ್, ಜಾಗತಿಕ ಬಂಟರ ಒಕ್ಕೂಟ ಅಧ್ಯಕ್ಷ ಹಾಗೂ ಮುಂಬೈ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಅತ್ತೂರು ವಿಜಯ ಶೆಟ್ಟಿ ಮುಂಬಾವಿ, ಏಳಿಂಜೆ ಲಕ್ಷ್ಮೀಜನಾರ್ದನ ದೇವಳದ ಆಡಳಿತ ಮೊಕ್ತೇಸರ ಪ್ರಭಾಕರ ಶೆಟ್ಟಿ ಕೊಂಜಾಲಗುತ್ತು, ಬಾಲಕೃಷ್ಣ ಆಚಾರ್ಯ ಮರವೂರು, ಮಂಜುನಾಥ್ ಬೆಂಗಳೂರು, ಉದ್ಯಮಿ ರಾಮಪ್ರಸಾದ್ ಭಟ್ ಚೆನ್ನೈ, ಅಝಿತ್ ಹೆಗ್ಡೆ ಪೂನಾ, ಎನ್.ಕೆ. ಶೆಟ್ಟಿ, ಉದಯ ಪಾಂಗಣ್ಣಾಯ ಉಪಸ್ಥಿತರಿದ್ದರು. ಗುರುರಾಜ್ ಮಲ್ಲಿಗೆಯಂಗಡಿ ಸ್ವಾಗತಿಸಿದರು. ಜನಾರ್ದನ ಕಿಲೆಂಜೂರು ವಂದಿಸಿದರು. ಶೈಲಜಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಹಿಂದು ಧರ್ಮ ಧಾರ್ಮಿಕ ನೆಲೆಗಟ್ಟಿನಲ್ಲಿ ನಿಂತಿದೆ. ಭಾರತೀಯರು ಸನಾತನ ಧರ್ಮದ ತಳಹದಿಯಲ್ಲಿದ್ದು, ಅದನ್ನು ನೆಚ್ಚಿಕೊಂಡಿದ್ದಾರೆ. ನಂಬಿಕೆ ಪಕ್ಕದಲ್ಲಿ ನೆಮ್ಮದಿ ಇದೆ. ಶ್ರೀ ರಾಘವೇಶ್ವರ ಭಾರತೀತೀರ್ಥ ಸ್ವಾಮೀಜಿ ಹೊಸನಗರ ರಾಮಚಂದ್ರಾಪುರ ಮಠ