ಕಟಕಬಾವಿ ಗ್ರಾಪಂಗೆ ಅಧ್ಯಕ್ಷರಾಗಿ ಆಯ್ಕೆಯಾದ ಬಸಪ್ಪ ಗಂಜಾಳಿ ಅವರನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಸತ್ಕರಿಸಿದರು. ನಿಂಗಪ್ಪ ಪಕಾಂಡಿ, ಶ್ರೀಧರ ಮೂಡಲಗಿ, ಸತ್ಯಪ್ಪ ಪಾಟೀಲ ಇತರರಿದ್ದರು. 
ಜಿಲ್ಲೆ

ಕಟಕಬಾವಿ ಗ್ರಾಪಂಗೆ ಬಸಪ್ಪ ಗಂಜಾಳಿ ಕಿಂಗ್

ಪ್ರಶಾಂತ ಹೂಗಾರ

ರಾಯಬಾಗ: ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ತಾಲೂಕಿನ ಕಟಕಬಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಜರುಗಿದ ಚುನಾವಣಾ ಪ್ರಕ್ರಿಯೆಯಲ್ಲಿ ಬಸಪ್ಪ ಗಂಜಾಳಿ ಅವಿರೋಧ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಬಸಪ್ಪ ಗಂಜಾಳಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕಂಕಣವಾಡಿ ಜೆಎಲ್ಬಿಸಿ ಎಇಇ ಶೇಖರ ರಾಠೋಡ ಘೋಷಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಸತ್ಕರಿಸಿದರು. ಉಪಾಧ್ಯಕ್ಷೆ ಲಕ್ಕವ್ವ ಮೇಳವಂಕಿ, ಪ್ರತಿಭಾ ದೇಸಾಯಿ, ಫಕೀರವ್ವ ಪಾತ್ರೋಟ, ಸತ್ಯವ್ವ ಮಾಂಗ, ಬಾಳಪ್ಪ ಮಗದುಮ್ಮ, ಕಲ್ಲಪ್ಪ ಮೂಡಲಗಿ, ರಾಜು ಮಾಳಗೆ, ನಿಂಗಪ್ಪ ಪಕಾಂಡಿ, ಶ್ರೀಧರ ಮೂಡಲಗಿ, ಸತ್ಯಪ್ಪ ಪಾಟೀಲ, ಈರಪ್ಪ ಮಗದುಮ್ಮ, ರೇವಪ್ಪ ಮಾಳಿ, ನಿಂಗಪ್ಪ ಬಿರಾಜನವರ, ಬಾಳಗೌಡ ಪಾಟೀಲ, ಈರಪ್ಪ ಕಬಾಡಗಿ, ನಿಂಗಪ್ಪ ಪಾತ್ರೋಟ, ಸಿದ್ದಗೌಡ ಕಬಾಡಗಿ, ಪುಂಡಲೀಕ ಮೇಳವಂಕಿ ಇತರರಿದ್ದರು.