ಸಿಂಧನೂರು: ತಾಲೂಕಿನ ರಾಗಲಪರ್ವಿ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯದ ಮೊದಲ ಮಹಡಿಯಲ್ಲಿ ತಡೆಗೋಡೆ ನಿರ್ಮಾಣ, ಶಾಲಾ ಕಾಂಪೌಂಡ್‌ಗೆ ಗೇಟ್, ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರವೇ (ಸ್ವಾಭಿಮಾನಿ ಬಣ) ತಾಲೂಕು ಘಟಕ ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಬಸವಲಿಂಗಪ್ಪ ಹುಡೇದ್‌ಗೆ ಮನವಿ ಸಲ್ಲಿಸಿತು.
ಇದನ್ನೂ ಓದಿ: ಕಸ್ತೂರಬಾ ಗಾಂಧಿ ಅಧ್ಯಯನವಾಗಲಿ
ವಸತಿ ನಿಲಯದ ಕಟ್ಟಡವನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಬಾಲಕಿಯರು ಜೀವ ಕೈಯಲ್ಲಿಡಿದು ಅಭ್ಯಾಸ ಮಾಡುತ್ತಿದ್ದಾರೆ. ವಸತಿ ಶಾಲೆಯಲ್ಲಿ 6 ರಿಂದ 10ನೇ ತರಗತಿವರೆಗೆ 100 ವಿದ್ಯಾರ್ಥಿನಿಯರಿದ್ದು, ಸೌಲಭ್ಯ ಒದಗಿಸಬೇಕು.
ಪ್ರವೇಶದ್ವಾರದ ಗೇಟ್ ಇಲ್ಲದ ಕಾರಣ ಆವರಣಕ್ಕೆ ಜಾನುವಾರಗಳು ನುಗ್ಗುತ್ತಿವೆ. ರಾತ್ರಿಯಲ್ಲಿ ಅಪರಿಚಿತರು ಅಕ್ರಮ ಪ್ರವೇಶ ಮಾಡುತ್ತಾರೆ. ಮೊದಲನೇ ಮಹಡಿಯಲ್ಲಿ ತಡೆಗೋಡೆ ನಿರ್ಮಾಣ ಮಾಡಿಲ್ಲ. ಇದರಿಂದ ವಿದ್ಯಾರ್ಥಿನಿಯರಿಗೆ ಜೀವ ಭಯವಿದ್ದು, ಶೀಘ್ರ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಮಂಜುನಾಥ ಗಾಣಗೇರಾ, ಪ್ರ.ಕಾರ್ಯದರ್ಶಿ ಅಯ್ಯಪ್ಪ ಮೇಟಿ, ನಗರ ಯುವ ಘಟಕ ಅಧ್ಯಕ್ಷ ರುದ್ರಗೌಡ, ಪ್ರಮುಖರಾದ ಪರಶುರಾಮ ಗೀತಾಕ್ಯಾಂಪ್, ಪ್ರಶಾಂತಕುಮಾರ ಇದ್ದರು.