ಹನುಮಸಾಗರದ ಕಸ್ತೂರಬಾ ಗಾಂಧಿ ವಸತಿ ಶಾಲೆ ವಿದ್ಯಾರ್ಥಿನಿಯರಾದ ಮಹಾಂತಮ್ಮ ಲಕ್ಕಲಕಟ್ಟಿ , ಫೈರೋಜ್ ಬೇಗಂ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸಾಧನೆಗೈದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಕ್ಕೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ವಸತಿ ನಿಲಯದ ಮೇಲ್ವಿಚಾರಿಕಿ ರುಬಿಯಾ ಬೇಗಂ, ಸಂಪನ್ಮೂಲ ವ್ಯಕ್ತಿಗಳಾದ ಶಿವಕುಮಾರ, ಸಂಗಮೇಶ ಇತರರಿದ್ದರು. 
ಜಿಲ್ಲೆ

ಕಸ್ತೂರಬಾ ಗಾಂಧಿ ಶಾಲೆ ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆ

ಹನುಮಸಾಗರ: ಪಟ್ಟಣದ ಕಸ್ತೂರಬಾ ಗಾಂಧಿ ವಸತಿ ಶಾಲೆ ವಿದ್ಯಾರ್ಥಿನಿಯರು ಟಣಕನಕಲ್ನಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಜನಪದ ಗೀತೆಯಲ್ಲಿ ಮಹಾಂತಮ್ಮ ಲಕ್ಕಲಕಟ್ಟಿ ಪ್ರಥಮ, ಛದ್ಮ ವೇಷದಲ್ಲಿ ಫೈರೋಜ್ ಬೇಗಂ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿನಿಯರ ಸಾಧನೆಗೆ ಶಾಲೆ ಶಿಕ್ಷಕರು, ಸಿಬ್ಬಂಧಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಸತಿ ನಿಲಯದ ಮೇಲ್ವಿಚಾರಿಕಿ ರುಬಿಯಾ ಬೇಗಂ, ಶಿಕ್ಷಕಿಯರಾದ ಶಕುಂತಲಾ ಚಿನಿವಾಲರ, ಜ್ಯೋತಿ ಬಾಳಿಹಳ್ಳಮಠ ಇತರರಿದ್ದರು.