ಜಿಲ್ಲೆ

ಅನ್ಯಾಯದ ವಿರುದ್ಧ ಹೋರಾಟ : ಭೀಮಾಶಂಕರ್ ಪಾಟೀಲ್ ಭರವಸೆ

ಸೌಮ್ಯ ಆರ್

ಕಾಸರಗೋಡು: ಗಡಿನಾಡು ಕಾಸರಗೋಡಿನ ಕನ್ನಡಿಗರಿಗೆ ಅನ್ಯಾಯವಾದರೆ ಕರ್ನಾಟಕ ನವ ನಿರ್ಮಾಣ ಸೇನೆ ಪ್ರಬಲವಾಗಿ ಪ್ರತಿಭಟಿಸುತ್ತದೆ ಎಂದು ಕರ್ನಾಟಕ ನವ ನಿರ್ಮಾಣ ಸೇನೆಯ ಅಧ್ಯಕ್ಷ ಭೀಮಾಶಂಕರ್ ಪಾಟೀಲ್ ಹೇಳಿದರು.

ಕಾಸರಗೋಡು ಅಡ್ಕತ್ತಬೈಲಿನಲ್ಲಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ, ಕೋಟೆಕಣಿ ಶ್ರೀರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಹಾಗೂ ಕರ್ನಾಟಕ ನವ ನಿರ್ಮಾಣ ಸೇನೆ ಸಹಯೋಗದೊಂದಿಗೆ ಆಯೋಜಿಸಲಾದ ‘ಕಾಸರಗೋಡು ಕನ್ನಡ ರಾಜ್ಯೋತ್ಸವ-ಕನ್ನಡ ಹಬ್ಬ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು. ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಎಂ.ಎಲ್.ಅಶ್ವಿನಿ, ಕಸಾಪ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ್‌ನಾರಾಯಣ್ ತೊಟ್ಟೆತ್ತೋಡಿ, ಕನ್ನಡ ಹೋರಾಟಗಾರರಾದ ರಾಮಪ್ರಸಾದ್, ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ, ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಭರತ್‌ರಾಜ್ ಗಟ್ಟಿ, ಜಯಪ್ರಕಾಶ್ ತಾಯನ್ನೂರ್, ಕರ್ನಾಟಕ ನವ ನಿರ್ಮಾಣ ಸೇನೆ ಪದಾಧಿಕಾರಿಗಳಾದ ನಾಗರಾಜ್, ಭುವನ್, ಅರುಣ್ ಪರಮೇಶ್ವರ್, ಲಕ್ಷ್ಮೀ, ವಾಣಿ, ಮಾಲತಿ ಮೊದಲಾದವರು ಉಪಸ್ಥಿತರಿದ್ದರು.

ಕನ್ನಡ ಜಾಗೃತಿ ಸಮಿತಿ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿದರು. ದಿವಾಕರ ಅಶೋಕನಗರ ವಂದಿಸಿದರು. ಮೋಹನ ಆಚಾರ್ಯ ಪುಳ್ಕೂರು, ದಿವಾಕರ ಪಿ.ಅಶೋಕನಗರ ಮತ್ತು ಬಳಗದವರಿಂದ ಕನ್ನಡ ನಾಡಗೀತೆ ಸಮೂಹ ಗಾಯನ ನಡೆಯಿತು. ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಚಿಂತನ-ಮಂಥನ ನಡೆಸಿದರು.