ಜಿಲ್ಲೆ

ಮಹಿಳಾ ಸುರಕ್ಷತೆಯಲ್ಲಿ ಕೇರಳ ದೇಶಕ್ಕೆ ಮಾದರಿ : ಶಾಸಕ ಎಂ.ರಾಜಗೋಪಾಲನ್ ವಿಶ್ಲೇಷಣೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಮಹಿಳೆಯರಿಗೆ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಕೇರಳ ದೇಶಕ್ಕೆ ಮಾದರಿ ಎಂದು ತ್ರಿಕ್ಕರಿಪುರ ಶಾಸಕ ಎಂ.ರಾಜಗೋಪಾಲನ್ ಹೇಳಿದರು.

ಪಡನ್ನ ಕಡಪ್ಪುರ ಸರ್ಕಾರಿ ಮೀನುಗಾರಿಕಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ರಾಜ್ಯ ಮಹಿಳಾ ಆಯೋಗ ವತಿಯಿಂದ ಆಯೋಜಿಸಲಾದ ಎರಡು ದಿವಸಗಳ ಕಾಸರಗೋಡು ಕರಾವಳಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಮಟ್ಟದಲ್ಲಿ ಮತ್ತು ಮಹಿಳಾ ಆಯೋಗದ ನೇತೃತ್ವದಲ್ಲಿ ಮಹಿಳೆಯರನ್ನು ಸಾಮಾಜಿಕ ಪ್ರಗತಿಗೆ ಸಿದ್ಧಪಡಿಸಲು ಪರಿಣಾಮಕಾರಿ ಮಧ್ಯಸ್ಥಿಕೆ ನಡೆಸಲಾಗುತ್ತಿದೆ. ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಮತ್ತು ದೇಶದಲ್ಲಿ ಮೊದಲ ಬಾರಿಗೆ ಜೆಂಡರ್ ಬಜೆಟ್ ತಂದಿರುವ ಹೆಗ್ಗಳಿಕೆ ರಾಜ್ಯಕ್ಕಿದೆ. ಸಮಾಜದಲ್ಲಿ, ವಿಶೇಷವಾಗಿ ಕರಾವಳಿ ಪ್ರದೇಶಗಳಲ್ಲಿ ಮಹಿಳಾ ವಿರೋಧಿ ವಿಚಾರಗಳು ಇನ್ನೂ ಅಸ್ತಿತ್ವದಲ್ಲಿದ್ದು, ವಿವಿಧ ವಲಯಗಳ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಿ ನಿರ್ಮೂಲನೆ ಮಾಡುವ ಮಹತ್ತರ ಜವಾಬ್ದಾರಿ ಮಹಿಳಾ ಆಯೋಗದ ಮೇಲಿದೆ ಎಂದರು.

ಮಹಿಳಾ ಆಯೋಗ ಸದಸ್ಯೆ ಎ.ಪಿ ಕುಞೌಯಿಷಾ ಅಧ್ಯಕ್ಷತೆ ವಹಿಸಿದ್ದರು. ವಲಿಯಪರಂಬ ಗ್ರಾಪಂ ಅಧ್ಯಕ್ಷ ವಿ.ವಿ.ಸಜೀವನ್, ಉಪಾಧ್ಯಕ್ಷೆ ಪಿ.ಶ್ಯಾಮಲಾ, ನೀಲೇಶ್ವರ ಬ್ಲಾಕ್ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಅನಿಲ್‌ಕುಮಾರ್, ವಲಿಯಪರಂಬ ಗ್ರಾಮ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಖಾದರ್ ಪಾಂಡ್ಯಲ, ಆರೋಗ್ಯ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಇ.ಕೆ.ಮಲ್ಲಿಕಾ, ವಾರ್ಡ್ ಸದಸ್ಯೆ ಬುಷ್ರಾ ಮತ್ತು ಸಿಡಿಎಸ್ ಅಧ್ಯಕ್ಷೆ ಇ.ಕೆ. ಬಿಂದು ಉಪಸ್ಥಿತರಿದ್ದರು.

ವಿವಿಧ ವಿಷಯಗಳ ಸಮಾಲೋಚನೆ

ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯ್ದೆ, 2005ರ ಬಗ್ಗೆ ತ್ರಿಕರಿಪುರ ಮತ್ಸ್ಯ ಭವನದ ಮೀನುಗಾರಿಕಾ ವಿಸ್ತರಣಾಧಿಕಾರಿ ಎಂ.ಆಶಾಲತಾ ಹಾಗೂ ಮೀನುಗಾರಿಕೆ ಇಲಾಖೆಯಿಂದ ಜಾರಿಗೊಳಿಸಿರುವ ವಿವಿಧ ಯೋಜನೆಗಳ ಕುರಿತು ಎಸ್.ಐಶ್ವರ್ಯ ತರಗತಿ ನೀಡಿದರು. ಎರಡು ದಿನಗಳ ಈ ಶಿಬಿರದಲ್ಲಿ ಕರಾವಳಿ ಪ್ರದೇಶದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅಲ್ಲಿನ ದೈಹಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ನಿರ್ಣಯಿಸಲಾಯಿತು.

ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಕೌಟುಂಬಿಕ ಹಿಂಸಾಚಾರದ ದೂರುಗಳು ಪಂಚಾಯಿತಿ ಮತ್ತು ಜಿಲ್ಲಾ ಮಟ್ಟದಲ್ಲಿ ಜಾಗೃತಿ ಸಮಿತಿ ಮತ್ತು ರಾಜ್ಯ ಮಟ್ಟದಲ್ಲಿ ಮಹಿಳಾ ಆಯೋಗ ಸಮಸ್ಯೆಯನ್ನು ವಿಳಂಬವಿಲ್ಲದೆ ಪರಿಹರಿಸಲು ಸಿದ್ಧವಾಗಿವೆ. ಎ.ಪಿ.ಕುಞೌಯಿಷಾ ಮಹಿಳಾ ಆಯೋಗ ಸದಸ್ಯೆ https://www.vijayavani.net/mangalore-chartered-accountants-day https://www.vijayavani.net/minister-ramalinga-reddy-visits-kukke