ಶೃಂಗೇರಿ: ಕನ್ನಡ ಭಾಷೆಯ ಅಸ್ತಿತ್ವದ ಜತೆ ಕನ್ನಡ ನಾಡಿನ ಸಂಸ್ಕೃತಿಗೆ ಕಸಾಪ ನೀಡಿದ ಕೊಡುಗೆ ಅನನ್ಯ ಎಂದು ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ ತಿಳಿಸಿದರು.
ಕನ್ನಡ ಭವನದಲ್ಲಿ ತಾಲೂಕು ಕಸಾಪದಿಂದ ನಡೆದ ನುಡಿ ನಿತ್ಯೋತ್ಸವ-2024ರ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಮಾತನಾಡಿ, ದ್ರಾವಿಡ ಭಾಷೆಗಳಲ್ಲಿ ಪ್ರಮುಖವಾದ ಹಾಗೂ ಭಾರತದ ಪುರಾತನವಾದ ಭಾಷೆಗಳಲ್ಲಿ ಕನ್ನಡ ಭಾಷೆ ಕೂಡಾ ಒಂದು ಎಂದರು.
ಕನ್ನಡ ನಮ್ಮ ಮಾತೃಭಾಷೆ. ಕನ್ನಡ ಸಾಹಿತಿಗಳಾದ ಕುವೆಂಪು,ದ.ರಾ.ಬೇಂದ್ರೆ, ಶಿವರಾಮ ಕಾರಂತ ಅತಿ ಹೆಚ್ಚು ಪುಸ್ತಕಗಳನ್ನು ಬರೆದು ಭಾಷೆ ಮೌಲ್ಯವನ್ನು ಎತ್ತಿಹಿಡಿದಿದ್ದಾರೆ. ತಾಲೂಕು ಕಸಾಪ ಸತತ ಮೂರನೇ ವರ್ಷ ನವೆಂಬರ್ ಪೂರ್ತಿ ನುಡಿ ನಿತ್ಯೋತ್ಸವದ ಹೆಸರಿನಲ್ಲಿ ಭಾಷೆ ಹಾಗೂ ಸಾಹಿತ್ಯದ ಕಂಪನ್ನು ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಾರ ಪಡಿಸುವಲ್ಲಿ ಯಶಸ್ಸುಗಳಿಸಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಹೆಗ್ಗದ್ದೆ ಶಿವಾನಂದರಾವ್, ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಿ ಅನಂದ ಸ್ವಾಮಿ, ತಾಲೂಕು ಹೋಬಳಿ ಅಧ್ಯಕ್ಷ ಮಂಜುನಾಥ್ ನಾಯ್ಕ, ದಿನೇಶ್ ಅಂಗುರ್ಡಿ, ಪದಾಧಿಕಾರಿಗಳಾದ ಶ್ರೀಧರ್ ರಾವ್ ಅಣ್ಣುಕೂಡಿಗೆ, ಅನಂದ ಸ್ವಾಮಿ, ರಮೇಶ್ ಶೂನ್ಯ, ವಿಶ್ವನಾಥ್ ಹಾಜರಿದ್ದರು.