ಜಿಲ್ಲೆ

ಬಾನು ಮುಷ್ತಾಕ "ಎದೆಯ ಹಣತೆ' ಪುಸ್ತಕ ವಿಮರ್ಶೆ

Gadag - Shivanand Hiremath

ಬಾನು ಮುಷ್ತಾಕ "ಎದೆಯ ಹಣತೆ' ಪುಸ್ತಕ ವಿಮರ್ಶೆ

ವಿಜಯವಾಣಿ ಸುದ್ದಿಜಾಲ ಗದಗ

ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆ ಅನುಭವಿಸುವ ಸಮಸ್ಯೆಗಳನ್ನು ಕತೆಗಳ ಮೂಲಕ ಸಮಾಜದ ಎದುರು ತೆರೆದಿಡುವ ಪ್ರಯತ್ನವನ್ನು ಎದೆಯ ಹಣತೆಯ ಕೃತಿಯಲ್ಲಿ ಬಾನು ಮುಷ್ತಾಕ ಅವರು ಮಾಡಿದ್ದಾರೆ ಎಂದು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧಕ ಮಂಜುನಾಥ ಕರಲಿಂಗಣ್ಣವರ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ತೋಂಟದ ಸಿದ್ಧಲಿಂಗ ಶ್ರೀಗಳ ಕನ್ನಡ ಭವನದಲ್ಲಿ ಜರುಗಿದ ಬೂಕರ್​ ಪ್ರಶಸ್ತಿ ಪುರಸತ ಎದೆಯ ಹಣತೆ ಕೃತಿ ಕುರಿತು ನಡೆದ ಸಂವಾದದಲ್ಲಿ ಮಾತನಾಡಿದರು.

ಸಮಾನತೆಯ ತಳಹದಿಯ ಮೇಲೆ ಮಹಿಳೆಯ ಬದುಕು ರೂಪಗೊಳ್ಳಬೇಕು. ಹೆಣ್ಣಿನ ಆಶೋತ್ತರಗಳನ್ನು ಅರ್ಥ ಮಾಡಿಕೊಂಡ ಸ್ಪಂದಿಸುವ ಕುಟುಂಬ ವ್ಯವಸ್ಥೆಯ ರೂಪಗೊಳ್ಳುವ ಅವಶ್ಯಕತೆಯನ್ನು ಇಲ್ಲಿಯ ಕತೆಗಳು ವ್ಯಕ್ತಪಡಿಸುತ್ತವೆ. ಇದು ಮಹಿಳೆಯರ ಜೀವನ, ಸಾಮಾಜಿಕ ಸಮಸ್ಯೆಗಳು ಮತ್ತು ಸಹಿಷ್ಣುತೆಯ ಕುರಿತು ಪ್ರತಿಪಾದಿಸುತ್ತದೆ. ಇಲ್ಲಿರುವ 12 ಕತೆಗಳು ಭಾವನಾತ್ಮಕವಾಗಿ ಆಳವಾಗಿದ್ದು ಓದುಗನಲ್ಲಿ ಸಂವೇದನೆಯನ್ನು ಸೃಷ್ಠಿಸುತ್ತವೆ. ಕುಟುಂಬದ ಪಾಲನೆಯ ಹಿನ್ನೆಲೆಯಲ್ಲಿ ಹೆಣ್ಣು ತೋರುವ ಬದ್ಧತೆ, ಸಹನೆ, ತಾಳ್ಮೆಯಂತಹ ಗುಣಗಳನ್ನು ಎತ್ತಿ ತೋರುತ್ತದೆ. ತನ್ಮೂಲಕ ಭೇದರಹಿತ ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಪಾದಿಸುತ್ತವೆ ಎಂದು ತಿಳಿಸಿದರು.

ಅಧ್ಯತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಸಾಮಾಜಿಕ ಸಮಾನತೆಗೆ ಶಿಣವೊಂದೇ ಪ್ರಬಲ ಅಸ್ತ್ರವಾಗಿದೆ. ಶಿಣದ ಕೊರತೆಯಿಂದ ಆಥಿರ್ಕ ಅಸಮಾನತೆ ತಲೆದೋರಿ ಅಸಮಾನ ವ್ಯವಸ್ಥೆ ಸಮಾಜದಲ್ಲಿ ರೂಪಗೊಳ್ಳುತ್ತಿದೆ. ಬಡವರು, ಕೆಳವರ್ಗದ ಜನರು ಅಮಾನವೀಯ ಕಟ್ಟಳೆಗಳಿಗೆ ಬಲಿಯಾಗುತ್ತಿದ್ದಾರೆ. ಮಹಿಳೆ ತನ್ನ ಇಡಿ ಜೀವನವನ್ನು ಕುಟುಂಬದ ಒಳಿತಿಗಾಗಿ ಮೀಸಲಿಟ್ಟರೂ ಎರಡನೇ ದರ್ಜೆಯ ಸ್ಥಾನಮಾನವನ್ನು ಹೊಂದಿದ್ದಾಳೆ. ಕತೆಗಳ ಮೂಲಕ ಮಹಿಳೆಯ ಸಮಸ್ಯೆಗಳನ್ನು ಮುಂದಿಟ್ಟು ಪರಿಹಾರವನ್ನು ಸೂಚಿಸುವ ಮನಸ್ಥಿತಿಯನ್ನು ನಿಮಿರ್ಸುವ ಪಯತ್ನವನ್ನು ಬಾನು ಮುಷ್ತಾಕ ಅವರು ಮಾಡುತ್ತಾರೆ ಎಂದು ತಿಳಿಸಿದರು.

ರತಾ ಗಿಡ್ನಂದಿ, ಕಿಶೋರಬಾಬು ನಾಗರಕಟ್ಟಿ, ಡಿ. ಎಸ್​.ಬಾಪುರಿ, ದತ್ತಪ್ರಸನ್ನ ಪಾಟೀಲ, ರತ್ನಕ್ಕ ಪಾಟೀಲ, ಶಾರದಾ ಬಾಣದ, ಸುಶಾಂತೆ ನೀಲಗುಂದ, ಜಯಶ್ರೀ ಅಂಗಡಿ, ಅನಸೂಯಾ ಮಿಟ್ಟಿ ಇತರರು ಇದ್ದರು.