ವಿಜಯವಾಣಿ ಸುದ್ದಿಜಾಲ ಗದಗ
ಸೌಹಾರ್ದದ ಸೆಲೆ ಬತ್ತದ ಹಾಗೇ ನೋಡಿಕೊಳ್ಳುವ ಜವಾಬ್ದಾರಿ ಸಾಹಿತ್ಯಕ್ಕಿರಬೇಕು. ಸಮಾಜದ ಓರೆಕೋರೆಗಳಿಗೆ ಸ್ಪಂದಿಸುವ ಗುಣ ಬರಹಗಾರರನಿಗೆ ಇರಬೇಕಾದುದು ಅಗತ್ಯ ಎಂದು ಸಾಹಿತಿ ಪ್ರೊ. ಚಂದ್ರಶೇಖರ ವಸ್ತ್ರದ ಹೇಳಿದರು.
ಸಾಹಿತ್ಯ ಅಕಾಡೆಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನ ಜಿಲ್ಲಾ ಕಸಾಪ ಕಾರ್ಯಾಲಯದಲ್ಲಿ ಮಂಳವಾರ ಜರುಗಿದ ಸೃಜನ ಸಮ್ಮಿಲನ ಕಾರ್ಯಕ್ರಮದ ಅಧ್ಯತೆ ವಹಿಸಿ ಮಾತನಾಡಿ, ಉತ್ತಮ ಬರಹಗಾರನಿಂದ ತನ್ಮೂಲಕ ಸ್ವಾಸ ಸಮಾಜ ರೂಪುಗೊಳ್ಳಲು ಸಾಧ್ಯವಾಗುತ್ತದೆ. ಹೃದಯಗಳನ್ನು ಬೆಸೆಯುವದು ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಸಾಹಿತ್ಯ ಅಕಾಡೆಮಿ ಹಾಗೂ ಪರಿಷತ್ತಿನಂತಹ ಸಂಸ್ಥೆಗಳು ಸೃಜನಶೀಲ ಸಮಾಜವನ್ನು ನಿಮಿರ್ಸುವ ಹಿನ್ನೆಲೆಯಲ್ಲಿ ಪ್ರಯತ್ನಿಸುತ್ತಿವೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಹುಟ್ಟಿನಿಂದ ನಾವು ಸೃಜನಶೀಲರಾಗಿರುತ್ತವೆ. ನಮ್ಮೆಲ್ಲರ ಬಾಲ್ಯ ಕ್ರಿಯಾಶೀಲತೆಯಿಂದ ಕೂಡಿರುತ್ತದೆ. ಆದರೆ, ಸೃಜನಶೀಲತೆಗೆ ಇಂಬುಗೊಡುವ ಶಿಣ ವ್ಯವಸ್ಥೆ ಇಲ್ಲದಿರುವರಿಂದ ಹೊಸ ಸೃಷ್ಠಿಯ ಅವಕಾಶಗಳು ನಿರೀತ ಮಟ್ಟದಲ್ಲಿ ಇಲ್ಲದಿರುವದನ್ನು ಕಾಣುತ್ತೇವೆ. ಸೃಜನಶೀಲತೆಯ ಭಾಗವಾಗಿರುವ ಸಾಹಿತ್ಯದಿಂದ ಸಮಾಧಾನ ದೊರೆಯುತ್ತದೆ ಎಂದು ತಿಳಿಸಿದರು.
ಕೇಂದ್ರ ಸಾಹಿತ್ಯ ಅಕಾಡೆಮಿಯ ಸಲಹಾ ಸಮಿತಿ ಸದಸ್ಯ ಬಸವರಾಜ ಸಾದರ ಮಾತನಾಡಿ, ಸಾಹಿತ್ಯದ ಮೂಲಕ ಹೃದಯಗಳನ್ನು ಬೆಸೆಯುವ ಕಾರ್ಯವನ್ನು ಸಾಹಿತ್ಯ ಅಕಾಡೆಮಿ ಮಾಡುತ್ತಿದೆ. ಸಾಮಾನ್ಯವಾಗಿ ಕವಿತೆಗಳನ್ನು ವಾಚಿಸುವ ಅವಕಾಶಗಳು ವೇದಿಕೆಯಲ್ಲಿ ದೊರೆಯುತ್ತವೆ. ಸಣ್ಣಕತೆ, ಪ್ರಬಂಧ ಮುಂತಾದ ಪ್ರಕಾರಗಳ ಅಭಿವ್ಯಕ್ತಿಗೆ ಈ ಕಾರ್ಯಕ್ರಮದ ಮೂಲಕ ಅವಕಾಶ ಕಲ್ಪಿಸಲಾಗಿದೆ. ಇಂದಿನ ಸಂಕೀರ್ಣ ಬದುಕಿಗೆ ಪ್ರೀತಿಯ ಸಂಗಾತವನ್ನು ಸಾಹಿತ್ಯ ನೀಡುತ್ತದೆ.
ಮಾಜಿ ಸಚಿವ ಎಸ್. ಎಸ್. ಪಾಟೀಲ, ಡಾ. ದತ್ತಪ್ರಸನ್ನ ಪಾಟೀಲ, ಪ್ರೊ. ಅನ್ನದಾನಿ ಹಿರೇಮಠ, ಪ್ರಕಾಶ ಕಡಮೆ, ಡಾ. ರಾಜಶೇಖರ ದಾನರಡ್ಡಿ, ಡಾ. ನಾಗಪ್ಪ ಸುರಳಿಕೇರಿ, ಬಿ. ಬಿ.ಪಾಟೀಲ, ಡಾ. ಶಿವಪ್ಪ ಕುರಿ, ಸಿ. ಕೆ. ಎಚ್. ಶಾಸ್ತ್ರಿ, ಡಾ. ಅಪ್ಪಣ್ಣ ಹಂಜೆ, ಭಾರತಿ ಕೋಟಿ, ಮಹಾಂತೇಶ ಹಿರೇಕುರುಬರ ಇತರರು ಇದ್ದರು.