ಸಿಂಧನೂರು: ಕಳೆದ ಒಂದು ವರ್ಷದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದಿಂದ ಅತ್ಯುತ್ತಮವಾದ ಕಾರ್ಯಗಳು ನಡೆದಿರುವುದು ಶ್ಲಾಘನೀಯ. ದತ್ತಿ ಹೆಸರಿನಲ್ಲಿ ನಡೆದ ಉಪನ್ಯಾಸಗಳು ಕೂಡ ಸ್ತುತ್ಯರ್ಹ ಎಂದು ಮಸ್ಕಿ ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯಸ್ವಾಮೀಜಿ ಹೇಳಿದರು.
ನಗರದಲ್ಲಿ ಕಸಾಪದಿಂದ ಆಯೋಜಿಸಿದ್ದ ಎರಡನೇ ವರ್ಷದ ಸಂಭ್ರಮ ಹಾಗೂ 2023-24ನೇ ಸಾಲಿನ ವಾರ್ಷಿಕ ವರದಿ ಮಂಡನೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡ ಉಳಿಸುವ ಕೆಲಸವಾಗುತ್ತಿದೆ. ಉತ್ತಮವಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ಸಾಹಿತ್ಯದ ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ ಎಂದರು.
ಉಪನ್ಯಾಸಕಿ ಆನಂದಿ ಲಾಹೋಟಿ 2023-24 ನೇ ಸಾಲಿನ 57 ದತ್ತಿ ಉಪನ್ಯಾಸ ಕಾರ್ಯಕ್ರಮಗಳ ವರದಿ ವಾಚಿಸಿದರು. ಕಸಾಪ ತಾಲೂಕು ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ ದತ್ತಿ, ದಾರ್ಶನಿಕರ ಮಾಸಿಕ ಕವಿಗೋಷ್ಠಿ ಮತ್ತು ಇತರ ಕಾರ್ಯಕ್ರಮಗಳ ಖರ್ಚು-ವೆಚ್ಚದ ಮಾಹಿತಿ ನೀಡಿದರು.
ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಅಧ್ಯಕ್ಷ ಟಿ.ಹುಸೇನಸಾಬ್, ಡಾ.ಚನ್ನನಗೌಡ ಪೊಲೀಸ್ ಪಾಟೀಲ್, ಪ್ರಮುಖರಾದ ಭಾರತಿ ತಿವಾರಿ, ವಿ.ಸಿ.ಪಾಟೀಲ್, ಶರಣಬಸವ ಮೇರಿನಾಳ, ವೀರೇಶ ಶಿವನಗುತ್ತಿ, ಶರಭಯ್ಯಸ್ವಾಮಿ ಹಿರೇಮಠ, ಅಮರೇಶ ಎಂ.ಕೆ., ಸಂಗಮೇಶ ಮೆಂಟಿಗೇರಿ, ಶೇಖ್ ಬಷೀರ್ ಏತ್ಮಾರಿ, ಗುಂಡೂರಾವ್ ಚನ್ನಳ್ಳಿ, ಶಿವುಕುಮಾರ ಜವಳಿ ಇದ್ದರು.