ವಿಜಯಪುರದ ಕಸಾಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸವನ್ನು ಹಿರಿಯ ಸಾಹಿತಿ ಡಾ. ಮಲ್ಲಿಕಾರ್ಜುನ ಮೇತ್ರಿ ಉದ್ಘಾಟಿಸಿದರು. ಹಾಸಿಂಪೀರ ವಾಲಿಕಾರ, ಶಿಲ್ಪಾ ಭಸ್ಮೆ, ಅಭಿಷೇಕ ಚಕ್ರವರ್ತಿ ಮತ್ತಿತರರಿದ್ದಾರೆ. 
ಜಿಲ್ಲೆ

ಕನ್ನಡಿಗರ ಶಕ್ತಿ ಕೇಂದ್ರ ಕಸಾಪ

ವಿಜಯಪುರ: ಕನ್ನಡ ಸಾಹಿತ್ಯ ಪರಿಷತ್ತಿಗೆ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಇದೆ ಎಂದು ಹಿರಿಯ ಸಾಹಿತಿ ಡಾ. ಮಲ್ಲಿಕಾರ್ಜುನ ಮೇತ್ರಿ ಹೇಳಿದರು.

ನಗರದ ಕಸಾಪ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ. ರಾಮರಾವ ಮಲ್ಲಾರಾವ ನಾಡಗೀರ ದತ್ತಿ ಹಾಗೂ ಗೌರಮ್ಮ ಸಿದ್ರಾಮಪ್ಪ ವಾಡೇದ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿನ ಕಸಾಪ ಜಿಲ್ಲಾ ಟಕವು ಸಾಮರಸ್ಯದ ಕೇಂದ್ರವಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಶಕ್ತಿ ಕೇಂದ್ರ. ಇಲ್ಲಿ ಜಾತಿ, ಧರ್ಮಗಳ ಭೇದವಿಲ್ಲದೆ ಜನರು ಬರುತ್ತಾರೆ. ಸಾಹಿತ್ಯ ಪರಿಷತ್ತು ಪ್ರತಿಯೊಬ್ಬ ಕನ್ನಡಿಗನ ನೆಲೆಯಾಗಿದೆ.

ಉತ್ತರ ಕರ್ನಾಟಕದ ತುಂಬ ಕನ್ನಡದ ಕಂಪು ಹರಿಸಿದ ಕೀರ್ತಿ ವಿಜಯಪುರ ಜಿಲ್ಲೆಗೆ ಇದೆ. ಸದ್ಯ ಅದನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗುತ್ತಿರುವುದು ಸಂತಸದ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಗೌರವ ಕೋಶಾಧ್ಯಕ್ಷ ಡಾ. ಸಂಗಮೇಶ ಮೇತ್ರಿ ಮಾತನಾಡಿ, ಈ ನಾಡು ಸರ್ವಜನಾಂಗದ ಶಾಂತಿಯ ತೋಟ ಆಗಬೇಕಾದರೆ ಬುದ್ಧ, ಬಸವ ಹಾಗೂ ಅಂಬೇಡ್ಕರ್​ ಅವರ ತತ್ವಗಳನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು ಎಂದರು.

ಸಾಹಿತಿ ಶಿಲ್ಪಾ ಭಷ್ಮೆ ಅವರು ಬೇಂದ್ರೆ ಸಾಹಿತ್ಯ ಮತ್ತು ಬದುಕು ಕುರಿತು ಮಾತನಾಡಿ, ಬೇಂದ್ರೆ ಸಾಮರಸ್ಯ ಜೀವನದ ಕೊಂಡಿ. ಬದುಕಿಗೆ ಸಮೀಪವಾದ ಸಾಹಿತ್ಯ ನೀಡಿದ ಮಹಾನ್​ ಕವಿ. ಮಾತೃಭಾಷೆ ಮರಾಠಿಯಿಂದ ಬಂದು ಕನ್ನಡದಲ್ಲಿ ಅದ್ಭುತ ಕಾವ್ಯ ರಚಿಸಿ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದ ಮಹಾನ್​ ಚೇತನ ಎಂದರು.

ಕಸಾಪ ಸಂಟನಾ ಕಾರ್ಯದರ್ಶಿ ಅಭಿಷೇಕ ಚಕ್ರವರ್ತಿ ಅವರು ಡಾ. ಸಿದ್ಧಲಿಂಗಯ್ಯ ಅವರ ಬದುಕು ಬರಹ ಕುರಿತು ಉಪನ್ಯಾಸ ನೀಡಿ, ಸಿದ್ದಲಿಂಗಯ್ಯ ಅವರು ಎಂಬತ್ತರ ದಶಕದಲ್ಲಿ ನಾಡಿನ ತುಂಬ ಹೋರಾಟದ ಮೂಲಕ ದಲಿತರ ಬದುಕು ಸ್ವಚ್ಛ ಮಾಡಲು ಹೋರಾಡಿದರು. ಎರಡು ಬಾರಿ ಶಾಸಕರಾಗಿ ದಲಿತರು, ಮಹಿಳೆಯರು, ಅಂಗವಿಕಲರಿಗೆ ಸಿಗಬೇಕಾದ ಸವಲತ್ತುಗಳು ಕೊಡಲು ಹೋರಾಡಿದ ಮಹಾನ್​ ಹೋರಾಟಗಾರ ಎಂದು ಹೇಳಿದರು.

ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಆರ್​.ಸಿ. ವಾಡೇದ, ಶಾರದಾ ನಾಯಕ, ಶಾರದಾ ಲಮಾಣಿ ವೇದಿಕೆಯಲ್ಲಿದ್ದರು.

ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಡಾ. ಮಾಧವ ಗುಡಿ, ಜಯಶ್ರೀ ಹಿರೇಮಠ, ಅರ್ಜುನ ಶಿರೂರ, ಲತಾ ಗುಂಡಿ, ರಾಜಾಸಾಬ ಶಿವನಗುತ್ತಿ, ಬಿ.ಎಂ. ಆಜೂರ, ಎಸ್​.ಎಲ್​. ಇಂಗಳೇಶ್ವರ. ಡಾ. ಮಹಿಬೂಬ ತಾಜಬಾವಡಿ, ಅರ್ಜುನ ಶಿರೂರ. ಟಿ.ಆರ್​. ಹಾವಿನಾಳ, ಜಿ.ಎಸ್​. ಬಳ್ಳೂರ, ಸಿದ್ರಾಮಪ್ಪ ಜಂಗಮಶೆಟ್ಟಿ, ಅಣ್ಣುಗೌಡ ಬಿರಾದಾರ, ವೈ.ಎಚ್​. ಲಂಬು, ಭೀಮಪ್ಪ ಮಸಬಿನಾಳ, ಭಾಗೀರಥಿ ಸಿಂದೆ, ಸಹನಾ ಬಿರಾದಾರ, ಗಂಗಮ್ಮ ರಡ್ಡಿ, ಫಕುರುದ್ದೀನ ಹೀರೆಕೊಪ್ಪ, ಶ್ರೀಕಾಂತ ನಾಡಗೌಡ, ಸದಾಶಿವ ಅಂಗಡಿ, ಮಂಜುಳಾ ಅಂಗಡಿ, ಎನ್​.ಎಂ. ಹರನಾಳ, ಶಿವಾಜಿ ಮೋರೆ, ಅಲಿಖಾನ ಪಠಾಣ ಮತ್ತಿತರರಿದ್ದರು.

ಪರವೀನ ಶೇಖ ಸ್ವಾಗತಿಸಿ ಗೌರವಿಸಿದರು. ವಿಜಯಲಕ್ಷಿ$್ಮಹಳಕಟ್ಟಿ ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು.