ಜಿಲ್ಲೆ

24 ರಂದು ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮ

ಎ. ಆರ್. ರಘುರಾಮ

ಶನಿವಾರಸಂತೆ : ಕನ್ನಡ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಸಮಿತಿ, ಸೋಮವಾರಪೇಟೆ ಮತ್ತು ಕೊಡ್ಲಿಪೇಟೆ ಘಟಕಗಳೊಂದಿಗೆ ಕೊಡ್ಲಿಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ 24ರ ಬೆಳಗ್ಗೆ 10ಕ್ಕೆ ಬೆಳಗ್ಗೆ 10ಕ್ಕೆ ಪುಟ್ಟಮ್ಮ ಮತ್ತು ದಿ. ಹೆಬ್ಬಾಲೆ ನಂಜಾಚಾರ್ ದತ್ತಿನಿಧಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಮಾಜಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ - ವಿಷಯ ಕುರಿತು ಸಮಾಜಸೇವಕ ಭಗವಾನ್ ಉಪನ್ಯಾಸ ನೀಡಲಿದ್ದಾರೆ.ಕೊಡ್ಲಿಪೇಟೆ ಹೋಬಳಿ ಕಸಾಪ ಅಧ್ಯಕ್ಷ ಬಿ.ಪಿ. ಶಾಂತಮಲ್ಲಪ್ಪ, ಕಸಾಪ ಘಟಕ ಮಾಜಿ ಅಧ್ಯಕ್ಷ ರಮೇಶ, ಜಿಲ್ಲಾ ಘಟಕ ಅಧ್ಯಕ್ಷ ಎಂ.ಪಿ ಕೇಶವ ಕಾಮತ್, ತಾಲೂಕು ಅಧ್ಯಕ್ಷ ವಿಜೇತ್, ಕೊಡ್ಲಿಪೇಟೆ ಸರ್ಕಾರಿ ಪ್ರೌಢಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸಂಧ್ಯಾ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಆಶಾ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶೇಖರ ದತ್ತಿ ಪ್ರಾಯೋಜಕ ಸುಬ್ರಹ್ಮಣ್ಯ ಉಪಸ್ಥಿತರಿರುತ್ತಾರೆ.