ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕಳೆದ ನಾಲ್ಕು ವರ್ಷಗಳಲ್ಲಿ ನಿರೀಕ್ಷಿತ ಕೆಲಸ ಕಾರ್ಯ ಮಾಡದೇ ವಿಫಲವಾಗಿದ್ದು, ಇದರ ಜತೆಗೆ ಪರಿಷತ್ತಿನ ಬೈಲಾ ನಿಯಮಗಳನ್ನು ಉಲ್ಲಂಘಿಸಿ ಏಳು ತಾಲೂಕ ಅಧ್ಯಕ್ಷರನ್ನು ನೇಮಕ ಮಾಡುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆಂದು ಬೆಳಕು ಟ್ರಸ್ಟ್ ಸಂಸ್ಥಾಪಕ ಅಣ್ಣಪ್ಪ ಮೇಟಿಗೌಡ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಕಸಾಪ ಅಧ್ಯಕ್ಷ ರಂಗಣ್ಣ ಪಾಟೀಲ್ ಲಿಂಗಸೂಗೂರು ಸಾಹಿತ್ಯ ಸಮ್ಮೇಳನ ಹೊರತುಪಡಿಸಿದರೆ ಬೇರೆ ಯಾವುದೇ ಸಾಹಿತ್ಯ ಚಟುವಟಿಕೆಗಳ ಕೆಲಸ ಮಾಡಿಲ್ಲವೆಂದು ಆರೋಪಿಸಿದರು.ಜಿಲ್ಲಾ ಕಾರ್ಯಕಾರಿ ಸಮಿತಿ ಶಿಫಾರಸ್ಸು ಕಳುಹಿಸುವಾಗಿ ತಾಲೂಕ ಅಧ್ಯಕ್ಷ ರಾಜೀನಾಮೆ ಪತ್ರ ಕಳುಹಿಸದೇ ಇರುದರಿಂದ ಕೇಂದ್ರ ಸಮಿತಿ ಜಿಲ್ಲಾ ಕಾರ್ಯಕಾರಿ ಸಮಿತಿ ಆಯ್ಕೆಯನ್ನು ರದ್ದುಗೊಳಿಸಿದೆ.
ಜಿಲ್ಲಾಧ್ಯಕ್ಷರು ಕೇಂದ್ರ ಪರಿಷತ್ತು ಸಭೆಗೂ ಹಾಜರಾಗದೇ ಸಮಿತಿಯೊಂದಿಗೆ ಸಂಪರ್ಕದಲ್ಲಿಯೇ ಇಲ್ಲದೇ ಇರುವದರಿಂದ ಜಿಲ್ಲಾ ಸಾಹಿತ್ಯ ಪರಿಷತ್‌ನಿಂದ ನಡೆಯಬೇಕಾದ ಕಾರ್ಯಕ್ರಮಕೈ ತಪ್ಪಲು ಕಾರಣವಾಯಿತು. ಜಿಲ್ಲಾಧ್ಯಕ್ಷ ವೈಫಲ್ಯದಿಂದ ಕನ್ನಡ ಚಟುವಟಿಕೆ ನಡೆಸಲು ಸಾಧ್ಯವಾಗದ ಇರುವದರಿಂದ ರಾಜೀನಾಮೆ ನೀಡಬೇಕೆಂದರು. ಕೇಂದ್ರ ಸಮಿತಿಯ ಹೊಸ ಆಯ್ಕೆಯನ್ನು ರದ್ದುಗೊಳಿಸಿದೆ. ಹಳೆ ಮತ್ತು ಹೊಸ ಅಧ್ಯಕ್ಷರು ಗೊಂದಲಕ್ಕೆ ಸಿಲುಕುವಂತಾಗಿದೆ. ಕೇಂದ್ರ ಸಮಿತಿಗೆ ಪತ್ರ ಬರೆದು ಉತ್ತರ ಬಾರದೇ ಇದ್ದಾಗಲೂ ಸಂಪರ್ಕಸುವ ಗೋಜಿಗೆ ಜಿಲ್ಲಾ ಸಮಿತಿ ಮುಂದಾಗಿಲ್ಲ.
ಆದರಿಂದ ಪರಿಷತ್ತಿನ ಬೈಲಾ ನಿಯಮಗಳನ್ನು ಉಲ್ಲಂಘಿಸಿ ತಾಲೂಕ ಅಧ್ಯಕ್ಷರನ್ನು ನೇಮಕ ಮಾಡುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ. ಆದರಿಂದ ವಾರದೊಳಗೆ ಜಿಲ್ಲಾಧ್ಯಕ್ಷರ ರಾಜೀನಾಮೆ ಪಡೆದು ಆಡಳಿತಾಧಿಕಾರಿ ಅಥವಾ ಹಂಗಾಮಿ ಅಧ್ಯಕ್ಷರನ್ನು ಕೇಂದ್ರ ಸಮಿತಿ ನೇಮಕ ಮಾಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕಲಾ ಸಂಕುಲ ಸಂಸ್ಥೆಯ ಸಂಸ್ಥಾಪಕ ಮಾರುತಿ ಬಡಿಗೇರ, ಅಂಬು ಪಾಟೀಲ್ ಇದ್ದರು.