ಜಿಲ್ಲೆ

ಕಸಾಪ ದತ್ತಿ ಪ್ರಶಸ್ತಿಗಳು ಪ್ರಕಟ

ಪಂಕಜ ಕೆ.ಎಂ.

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ನೀಡುವ 2024ನೇ ಸಾಲಿನ ಪ್ರೊ. ಸಿ.ಎಚ್. ಮರಿದೇವರು ದತ್ತಿ ಪ್ರಶಸ್ತಿಗೆ ನಾನಾ ಕ್ಷೇತ್ರಗಳ ನಾಲ್ವರು ಸಾಧಕರು ಹಾಗೂ ಒಂದು ಕನ್ನಡ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ.

ಶಿಕ್ಷಣ ಕ್ಷೇತ್ರದಿಂದ ಡಾ. ಬಿ.ವಿ. ವಸಂತಕುಮಾರ್, ಡಾ. ಮ. ನಂಜುಂಡಸ್ವಾಮಿ (ಸಾಹಿತ್ಯ), ಸುಧಾ ನರಸಿಂಹರಾಜು (ಸಂಸ್ಕೃತಿ, ಕಲೆ), ಸಿದ್ಧಗಂಗಯ್ಯ ಹೊಲತಾಳು (ಕೃಷಿ ಮತ್ತು ನೀರಾವರಿ) ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕನ್ನಡಪರ ಸೇವೆಗಾಗಿ ಚಿಕ್ಕನಾಯಕನಹಳ್ಳಿ ಕನ್ನಡ ಸಂಘವನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಗಳು ತಲಾ 25 ಸಾವಿರ ನಗದು ಒಳಗೊಂಡಿರಲಿದೆ. ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.