ಜಿಲ್ಲೆ

ಸಂಘಟನಾತ್ಮಕವಾಗಿ ಹೋರಾಟ ಮಾಡೋಣ: ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ ಕರೆ

reportermys
ಮಂಡ್ಯ: ಕನ್ನಡ ನಾಡು, ನುಡಿ ವಿಷಯ ಬಂದಾಗ ಸಂಘಟನಾತ್ಮಕವಾಗಿ ಹೋರಾಟ ಮಾಡೋಣ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ ಕರೆ ನೀಡಿದರು.
ನಗರದ ಬಂದೀಗೌಡ ಬಡಾವಣೆಯ ಕಸಾಪ ಭವನದಲ್ಲಿ ಮಂಗಳವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಹಾಗೂ ಸಾಹಿತಿ ಡಾ.ಪ್ರದೀಪಕುಮಾರ ಹೆಬ್ರಿ ‘ಕೃತಿ ಕಾಣಿಕೆ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ನಿತ್ಯ ನಿರಂತರವಾಗಿ ಕನ್ನಡ ಉಳಿಸಿ ಬೆಳೆಸುವ ಕಾರ್ಯದಲ್ಲಿ ನಾವೆಲ್ಲ ನಿರತರಾಗೋಣ. 400ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಹೆಬ್ರಿ ಅವರು ಮತ್ತೊಂದು ಕೃತಿಯನ್ನು ಬಿಡುಗಡೆಗೊಳಿಸಿದ್ದಾರೆ. ನಿರಂತರವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಅವರು ಇನ್ನಷ್ಟು ಕೃತಿಗಳನ್ನು ಹೊರಬರಲಿ ಎಂದರು.
ಸಾಹಿತಿ ಡಾ.ಪ್ರದೀಪಕುಮಾರ್ ಹೆಬ್ರಿ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಉಪಾಧ್ಯಕ್ಷ ಎಂ.ಗುರುಪ್ರಸಾದ್, ಸಂಘಟನಾ ಕಾರ್ಯದರ್ಶಿ ಭಾಸ್ಕರ್, ಕೃಷ್ಣ, ಹೊಳಲು ಶ್ರೀಧರ್, ಎಂ.ಆರ್.ಮಂಜು ಮುತ್ತೇಗೆರೆ, ಶಿವಲಿಂಗೇಗೌಡ, ಚಂದ್ರಲಿಂಗು, ಸುಜಾತಾಕೃಷ್ಣ, ನಾಗರಾಜು ಇತರರಿದ್ದರು.