ಜಿಲ್ಲೆ

ರೈತ ಉತ್ಪಾದಕ ಗುಂಪು ಹೆಚ್ಚಾಗಲಿ: ಡಾ.ಎಚ್.ಎಲ್.ನಾಗರಾಜು ಕಿವಿಮಾತು

reportermys

ಮಂಡ್ಯ: ಜಿಲ್ಲೆಯಲ್ಲಿ ರೈತ ಉತ್ಪಾದಕ ಕಂಪನಿಗಳ ಗುಂಪುಗಳು ಹೆಚ್ಚಾಗಬೇಕು. ಇದರೊಂದಿಗೆ ಹೊಸ ಹೊಸ ಆಲೋಚನೆಗಳು ಸಕಾರಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.
ನಗರದ ಕರ್ನಾಟಕ ಸಂಘದಲ್ಲಿ ನಬಾರ್ಡ್ ಬೆಂಗಳೂರು, ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ ಸಿಎಸ್‌ಎಸ್ ಯೋಜನೆಯಡಿ ರಚಿತಗೊಂಡಿರುವ ರೈತ ಉತ್ಪಾದಕರ ಕಂಪನಿಗಳ ಆಡಳಿತ ಮಂಡಳಿ ನಿರ್ದೇಶಕರಿಗೆ ತರಬೇತಿ ಕಾರ್ಯಾಗಾರವನ್ನು ಗಣ್ಯರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು. ಸ್ವ ಸಹಾಯ ಸಂಘಗಳಿಗೆ ನಬಾರ್ಡ್ ಆರ್ಥಿಕವಾಗಿ ಸಹಾಯ ಮಾಡಿದೆ. ಇಡೀ ಪ್ರಪಂಚದಲ್ಲೇ ಬಡ ಮಹಿಳೆರನ್ನು ಉದ್ಯಮಶೀಲನ್ನಾಗಿದ್ದೇ ನಬಾರ್ಡ್. ಹೊಸ ಆರ್ಥಿಕ ಕ್ರಾಂತಿಗೆ ನಾಂದಿಹಾಡಿದೆ, ಮಹಿಳಾ ಗುಂಪುಗಳು, ಪುರುಷ ಗುಂಪುಗಳು ಉದ್ಯಮ ಸ್ಥಾಪಿಸಲು ಮಾರ್ಗದರ್ಶನ ನೀಡುತ್ತಿದೆ ಎಂದು ನುಡಿದರು.
ವಿಕಸನ ಸಂಸ್ಥೆಯ ನಿರ್ದೇಶಕ ಮಹೇಶ್‌ಚಂದ್ರಗುರು ಮಾತನಾಡಿ, ನಬಾರ್ಡ್ ಜತೆಗೂಡಿ ವಿಕಸನ ಸಂಸ್ಥೆಯ ರೈತರನ್ನು ಉದ್ದಿಮೆದಾರನ್ನಾಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನವನ್ನು ಸಕಾರಗೊಳಿಸಲು ಶ್ರಮಿಸುತ್ತಿದೆ. ರೈತರಲ್ಲಿ ಸಾಮರ್ಥ್ಯ ಹೆಚ್ಚಿಸಿ, ಸ್ವಾವಲಂಭಿಯಾಗಿ ಕಂಪನಿಗಳನ್ನು ಸ್ಥಾಪಿಸುವ ತರಬೇತಿ ಮಾರ್ಗದರ್ಶ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ದೀಪಕ್, ನಬಾರ್ಡ್ ಡಿಡಿಎಂ, ಹರ್ಷಿತಾ, ಎಸ್.ಬಿ.ಐ.ಪ್ರಾದೇಶಿಕ ಕಚೇರಿ ಪ್ರಾದೇಶಿಕ ವ್ಯವಸ್ಥಾಪಕಿ ಸಂಧ್ಯಾ ಇದ್ದರು.