ಜಿಲ್ಲೆ

Karwar Urban Bank Fraud :ಇನ್ನೂ 32.52 ಕೋಟಿ ರೂ. ಠೇವಣಿ ಮರುಪಾವತಿ ಬಾಕಿ

ಕಾರವಾರ ತಮ್ಮ ಠೇವಣಿಯನ್ನು ಮರಳಿಸಲು ಬ್ಯಾಂಕ್ ಅಧ್ಯಕ್ಷ ಹಾಗೂ ನಿರ್ದೇಶಕರಿಗೆ ಸೂಚನೆ ನೀಡುವಂತೆ (Karwar Urban Bank Fraud) ಕಾರವಾರ ಅರ್ಬನ್ ಬ್ಯಾಂಕ್‌ನ ಗ್ರಾಹಕರು ಜಿಲ್ಲಾಽಕಾರಿ ಕಚೇರಿಯ ಎರುದು ಬುಧವಾರ ಸಾಂಕೇತಿಕ ಪ್ರತಿಭಟನೆ ನಡೆಸಿ, ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು.

ಶತಮಾನೋತ್ಸವ ಪೂರೈಸಿದ ಬ್ಯಾಂಕ್ ಎಂದು ಹೆಸರಾಗಿರುವ ಕಾರವಾರ ಅರ್ಬನ್ ಬ್ಯಾಂಕ್‌ನಲ್ಲಿ ಠೇವಣಿ ಹಾಗೂ ಚಾಲ್ತಿ ಖಾತೆಯಲ್ಲಿ ಹಣ ಇಟ್ಟಿದ್ದೆವು. 2024 ರ ಮೇ 27 ರಂದು ಬ್ಯಾಂಕ್‌ನಲ್ಲಿ ಅವ್ಯವಹಾರವಾಗಿರುವುದು ಮಾಧ್ಯಮಗಳ ಮೂಲಕ ಬಹಿರಂಗವಾಗಿತ್ತು.

ಜೂನ್ 12 ರ ನಂತರ ಬ್ಯಾಂಕ್‌ನಲ್ಲಿ ಯಾವುದೇ ವ್ಯವಹಾರ ಮಾಡದಂತೆ ಐಆರ್‌ಬಿ ಸೂಚನೆ ನೀಡಿತ್ತು. ಮತ್ತು 5 ಲಕ್ಷ ರೂ.ವರೆಗಿನ ಠೇವಣಿಯು ಡಿಐಸಿಜಿಸಿ ಇನ್ಶುರೆನ್ಸ್ ವ್ಯಾಪ್ತಿಗೆ ಒಳಪಟ್ಟಿದ್ದು, ಅದನ್ನು ಇನ್ಶುರೆನ್ಸ್ ಕಂಪನಿ ಮರುಪಾವತಿ ಮಾಡಲಿದೆ ಎಂದು ಬ್ಯಾಂಕ್ ಅಧಿಕಾರಿ ಹಾಗೂ ಆಡಳಿತ ಮಂಡಳಿ ತಿಳಿಸಿತ್ತು.

Karwar Urban Bank Fraud 2082  ಠೇವಣಿದಾರರು ಸಂಕಷ್ಟದಲ್ಲಿ

ಅದರಂತೆ ದಾಖಲೆಗಳನ್ನು ಒದಗಿಸಿದ 1588 ಠೇವಣಿದಾರರ 37.79 ಕೋಟಿ ರೂ.ಮುದ್ದತ್ತು ಠೇವಣಿಗಳನ್ನು ಇದುವರೆಗೆ ಮರು ಪಾವತಿ ಮಾಡಿದೆ. ಉಳಿದ 2082 ಠೇವಣಿದಾರರ ಹಣ 32.52 ಕೋಟಿ ರೂ.ಗಳನ್ನು ಕೋರ್ ಬ್ಯಾಂಕಿಂಗ್ ಸಿಸ್ಟಂ ಸ್ಟಾಚುಟರಿ ಅಕೌಂಟೆಂಟ್ ಅವರಿಂದ ಪರಿಶೀಲನೆ ನಡೆಸಿ ಕೊಟ್ಟಲ್ಲಿ ಹಣ ಪಾವತಿಸುವುದಾಗಿ ಡಿಐಸಿಜಿಸಿ ಇನ್ಶುರೆನ್ಸ್ ತಿಳಿಸಿದೆ.

ಆದರೆ, ಕೋರ್ ಬ್ಯಾಂಕಿಂಗ್ ಸಿಸ್ಟಂ ಸ್ಟಾಚುಟರಿ ಅಕೌಂಟೆಂಟ್ ಪರಿಶೀಲನೆ ಕಾರ್ಯ ಇದುವರೆಗೂ ಮುಗಿದಿಲ್ಲ. ಬ್ಯಾಂಕ್ ಮ್ಯಾನೇಜರ್ ಮತ್ತು ಅಧಿಕಾರಿಗಳು 15 ದಿನ ಬಿಟ್ಟು ಬನ್ನಿ ಎಂದು ದಿನ ದೂಡುತ್ತಿದ್ದಾರೆ.

ಬ್ಯಾಂಕ್‌ನಲ್ಲಿ ಠೇವಣಿ ಇಟ್ಟ ಹಲವರು ಅದು ವಾಪಸ್ ಸಿಗದೇ ಮಕ್ಕಳ ಮದುವೆ ಮುಂದೆ ಹಾಕಿದ್ದಾರೆ. ಠೇವಣಿ ಹಣದಿಂದಲೇ ಜೀವನ ನಡೆಸುವ ವೃದ್ಧರಿಗೆ ಸಮಸ್ಯೆಯಾಗಿದೆ. ಈ ಕುರಿತು ಬ್ಯಾಂಕ್ ಆಡಳಿತ ಮಂಡಳಿಯ ಜತೆ ಮಾತುಕತೆ ನಡೆಸಿ, ಠೇವಣಿದಾರರ ಹಣವನ್ನು ಮರಳಿಸುವಂತೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಅವರಲ್ಲಿ ಠೇವಣಿದಾರರು ಮನವಿ ಮಾಡಿದರು.