ಕಾರವಾರ: ನಗರದ ಕಾರವಾರ ಅರ್ಬನ್ ಬ್ಯಾಂಕ್‌ಗೆ ಸಮಾಪನಾಽಕಾರಿ(ಲಿಕ್ವಿಡೇಟರ್) ಯನ್ನು ನೇಮಕ ಮಾಡಲಾಗಿದ್ದು, ಅವರು ಮಂಗಳವಾರ ಅಽಕಾರ ವಹಿಸಿಕೊಂಡು ಕಾರ್ಯ ಪ್ರಾರಂಭಿಸಿದ್ದಾರೆ. ಅಕ್ಟೋಬರ್ 3 ರಿಂದ ಬ್ಯಾಂಕ್ ಸಮಾಪನಾಽಕಾರಿಯ ನೇತೃತ್ವದಲ್ಲಿ ತೆರೆಯಲಿದ್ದು, ಸಾಲ ವಸೂಲಿ ಹಾಗೂ ಇತರ ಕೆಲ ಕಾರ್ಯ ಮಾಡಲಿದೆ ಎಂದು ಲಿಕ್ವಿಡೇಟರ್ ಮಾಹಿತಿ ನೀಡಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಕಾರವಾರ ಅರ್ಬನ್ ಬ್ಯಾಂಕ್‌ನ ಲೈಸನ್ಸ್ ರದ್ದು ಮಾಡಿ ಜು.22 ರಂದು ಆದೇಶ ಹೊರಡಿಸಿತ್ತು. ಬ್ಯಾಂಕ್‌ನ ಬಂಡವಾಳ ಕಡಿಮೆ ಇದ್ದು, ದುಡಿಯವ ಬಂಡವಾಳವೂ ಇರದ ಕಾರಣ ಬ್ಯಾಂಕಿನ ನಿರಂತರ ಕಾರ್ಯಾಚರಣೆಯು ಠೇವಣಿದಾರರ ಹಿತಾಸಕ್ತಿಗಳಿಗೆ ಹಾನಿಕಾರಕ ಎಂದು ಆರ್‌ಬಿಐ ಅಭಿಪ್ರಾಯಪಟ್ಟಿದೆ. ಬ್ಯಾಂಕ್‌ನ ಈಗಿನ ಆರ್ಥಿಕ ಸ್ಥಿತಿಯನ್ನು ಗಮನಿಸಿದರೆ, ಬ್ಯಾಂಕ್ ತನ್ನ ಠೇವಣಿದಾರರಿಗೆ ಸಂಪೂರ್ಣವಾಗಿ ಹಣವನ್ನು ಹಿಂದಿರುಗಿಸಲು ಅಸಮರ್ಥವಾಗಿದೆ ಎಂದು ಆರ್‌ಬಿಐ ಅಭಿಪ್ರಾಯಪಟ್ಟಿತ್ತು.
ಸಮಾಪನಾಽಕಾರಿಯನ್ನು ನೇಮಿಸುವಂತೆ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಸೂಚನೆ ನೀಡಿತ್ತು. ಅದರಂತೆ ಅಂಕೋಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಸಹಕಾರ ಅಭಿವೃದ್ಧಿ ಅಽಕಾರಿ ಮಮತಾ ನಾಯಕ ಅವರು ಮಂಗಳವಾರ ಅಽಕಾರ ವಹಿಸಿಕೊಂಡರು. ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯ ಅಽಕಾರಿಗಳು, ಬ್ಯಾಂಕ್ ಅಽಕಾರಿಗಳಿದ್ದರು.
ನಂತರ ಮಾಧ್ಯಮ ಪ್ರತಿನಿಽಗಳ ಜತೆ ಮಾತನಾಡಿದ ಮಮತಾ ನಾಯಕ ಅವರು, ಬ್ಯಾಂಕ್‌ನಲ್ಲಿ ಠೇವಣಿ ಇಟ್ಟವರಿಗೆ ಗರಿಷ್ಠ 5 ಲಕ್ಷದವರೆಗೆ ವಿಮಾ ಸೌಲಭ್ಯವಿದೆ. 3670 ಗ್ರಾಹಕರು 5 ಲಕ್ಷದ ಒಳಗೆ ಠೇವಣಿ ಇಟ್ಟಿದ್ದು, ಅವರ ಪೈಕಿ 1588 ಜನರಿಗೆ ಒಟ್ಟು 37.79 ರೂ.ಗಳನ್ನು ಡಿಪಾಸಿಟ್ ಇನ್ಶುರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ)ಕಳೆದ ಜೂನ್ 30 ರವರೆಗೆ ಪಾವತಿಸಿದೆ. ಇನ್ನೂ 2082 ಠೇವಣಿದಾರರಿಗೆ 32.52 ಕೋಟಿ ರೂ. ಪಾವತಿ ಮಾಡಬೇಕಿದ್ದು, ಆ ಪ್ರಕ್ರಿಯೆಯನ್ನು ಮೊದಲು ಪ್ರಾರಂಭಿಸಲಿದ್ದೇವೆ ಎಂದರು. ನಂತರ ಬ್ಯಾಂಕ್ ಅಽಕಾರಿಗಳು ನನ್ನ ಮಾರ್ಗದರ್ಶನದಲ್ಲಿ ಸಾಲ ವಸೂಲಾತಿ ಪ್ರಕ್ರಿಯೆ ಹಾಗೂ ಇತರ ಕಾರ್ಯಗಳನ್ನು ನಡೆಸಲಿದ್ದಾರೆ. ಸಹಕಾರ ಸಂಘಗಳ ಕಾಯ್ದೆಯ ನಿಯಮ 64 ಅಡಿ ಬ್ಯಾಂಕ್‌ನ ಅವ್ಯವಹಾರದ ಬಗ್ಗೆ ತನಿಖೆ ನಡೆಯುತ್ತಿದೆ. ಅದರ ವರದಿ ಬಂದ ನಂತರ ಮುಂದಿನ ಕ್ರಮ ಪ್ರಾರಂಭವಾಗಲಿದೆ ಎಂದರು.
ಏನಾಗಿತ್ತು...?
ಕಾರವಾರ ಅರ್ಬನ್ ಬ್ಯಾಂಕ್‌ನಲ್ಲಿ ಒಟ್ಟು 54 ಕೋಟಿ ರೂ. ಅವ್ಯವಹಾರವಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಚಂದ್ರಹಾಸ ಸ್ವಾರ್ ಅವರು 2024 ಮೇ 27 ರಂದು ಮಾಧ್ಯಮಗಳ ಮೂಲಕ ಪ್ರಕಟಿಸಿದ್ದರು. ಅದಕ್ಕೆ ಬ್ಯಾಂಕ್‌ನ ಹಿಂದಿನ ಜಿಎಂ ಗುರು ಬಾಂದೇಕರ್ ಕಾರಣ ಎಂದು ಆರೋಪಿಸಿದ್ದರು. ಆದರೆ, ಈ ಸಂಬAಧ ಯಾವುದೇ ಎಫ್‌ಐಆರ್ ದಾಖಲಾಗಿರಲಿಲ್ಲ. ಮುಖ್ಯವಾಗಿ ಜಿಎಂ ಗುರು ಬಾಂದೇಕರ್ ಕೆಲ ತಿಂಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.
ಬ್ಯಾಂಕ್ ನಷ್ಟದಲ್ಲಿದೆ. 5 ಲಕ್ಷದವರೆಗಿನ ಠೇವಣಿದಾರರಿಗೆ ಇನ್ಶುರೆನ್ಸ್ ಒದಗಿಸುವುದಾಗಿ ತಿಳಿಸಿದ್ದರು. ಎಲ್ಲ ಘಟನೆಗಳ ನಂತರ ಸಹಕಾರ ಸಂಘಗಳ ಉಪ ನಿಬಂಧಕರಿಂದ ತನಿಖೆ ನಡೆದಿತ್ತು. ಇದಾದ ನಂತರ 2024 ರ ಜೂನ್ 12 ರಂದು ಬ್ಯಾಂಕ್‌ನ ಆರ್ಥಿಕ ವ್ಯವಹಾರಗಳನ್ನು ಸ್ಥಗಿತ ಮಾಡಿ ಆರ್‌ಬಿಐ ಸೂಚನೆ ನೀಡಿತ್ತು.