ಕಾರವಾರ: ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾ ಲಯದಿಂದ ಶನಿವಾರ ಆಯೋಜಿಸಿದ್ದ 5 ಕಿಮೀ ಮ್ಯಾರಥಾನ್‌ನಲ್ಲಿ ಪುರುಷರ ವಿಭಾಗದಲ್ಲಿ ರಾಹುಲ್ ಹಾಗೂ ಮಹಿಳೆಯರ ವಿಭಾಗದಲ್ಲಿ ವಿದ್ಯಾ ಭಟ್ ಮೊದಲ ಸ್ಥಾನ ಪಡೆದರು. ಸರ್ಕಾರಿ ಮೆಡಿಕಲ್ ಕಾಲೇಜ್‌ನ ಚರ್ಮರೋಗ, ಮನೋರೋಗ ವಿಭಾಗದಿಂದ ವಿವಿಧ ಖಾಸಗಿ ಕಂಪನಿಗಳ ಪ್ರಾಯೋಜಕತ್ವದಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿತ್ತು. ಪುರುಷರ ವಿಭಾಗದಲ್ಲಿ ತುಳಜು ಹಾಗೂ ಮಹಿಳೆಯರ ವಿಭಾಗದಲ್ಲಿ ಮೇಘಾ ಪರಸೋಜಿ ಎರಡನೇ ಸ್ಥಾನ ಪಡೆದರು. ರನ್ ಾರ್ ಕಾಜ್ ಎಂಬ 3 ಕಿಮೀ ಮ್ಯಾರಥಾನ್ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಮೊಹಮದ್ ಜೆನ್ ಮತ್ತು ತಿಪ್ಪಣ್ಣ ಜಂಟಿಯಾಗಿ ಫಸ್ಟ್, ಉಮೇಶ ಲಮಾಣಿ ಎರಡನೇ ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಪೂರ್ವಿ ಮೊದಲ ಅವನಿ ಎರಡನೇ ಸ್ಥಾನ ಪಡೆದರು. ಕಾಲೇಜ್‌ನ ವಿದ್ಯಾರ್ಥಿ ಕೌನ್ಸಿಲ್‌ನಿಂದ ಮಾದಕ ದ್ರವ್ಯ ಕುರಿತು ಕಿರು ನಾಟಕ ಪ್ರದರ್ಶಿಸಲಾಯಿತು. ಡೀನ್ ಡಾ. ಗಜಾನನ ನಾಯಕ, ಆರ್‌ಎಂಒ ಡಾ. ಮಂಜುನಾಥ ಭಟ್, ಡಾ. ಶಂಕರ ರಾವ್, ಡಾ. ಶೃತಿ, ಡಾ. ಮೋಹನಬಾಬು, ಗಿರೀಶ ಅವರು ವಿಜೇತರಿಗೆ ಬಹುಮಾನ ವಿತರಿಸಿದರು. ಮನೋರೋಗ ವಿಭಾಗದ ಮುಖ್ಯಸ್ಥ ಡಾ. ವಿಜಯರಾಜ್ ವಂದಿಸಿದರು.