ಕಾರವಾರ: ಬಿಜೆಪಿ-ಜೆಡಿಎಸ್ ಮೈತ್ರಿ ಕಾರವಾರ ನಗರಸಭೆಯಲ್ಲೂ ಮುಂದುವರಿದಿದೆ. ನಗರಸಭೆ ಅಧ್ಯಕ್ಷರಾಗಿ ಬಿಜೆಪಿಯ ರವಿರಾಜ ಅಂಕೋಲೆಕರ್, ಉಪಾಧ್ಯಕ್ಷರಾಗಿ ಜೆಡಿಎಸ್‌ನ ಪ್ರೀತಿ ಮಧುಕರ್ ಜೋಶಿ ಬುಧವಾರ ಚುನಾಯಿತರಾದರು.
ಕಾರವಾರ ಉಪವಿಭಾಗಾಕಾರಿ ಕನಿಷ್ಕ ಸಮ್ಮುಖದಲ್ಲಿ ಚುನಾವಣಾ ಪ್ರಕ್ರಿಯೆಗಳು ನಡೆದವು. ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿಯ ರವಿರಾಜ ಅಂಕೋಲೆಕರ್ ಅಧ್ಯಕ್ಷ ಸ್ಥಾನಕ್ಕೆ ನಾಪತ್ರ ಸಲ್ಲಿಸಿದ್ದರು. ಹಿಂದೆ ಬಿಜೆಪಿ ಜತೆ ಸೇರಿ ಉಪಾಧ್ಯಕ್ಷರಾಗಿದ್ದ ಪಕ್ಷೇತರ ಸದಸ್ಯ ಪಿ.ಪಿ.ನಾಯ್ಕ ಕಾಂಗ್ರೆಸ್ ಪರವಾಗಿ ಅಧ್ಯಕ್ಷ ಆಕಾಂಕ್ಷಿಯಾಗಿ ನಾಮಪತ್ರ ಸಲ್ಲಿಸಿ, ಅಚ್ಚರಿ ಮೂಡಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನ ಪ್ರೀತಿ ಮಧುಕರ ಜೋಶಿ, ಕಾಂಗ್ರೆಸ್‌ನಿAದ ಸ್ನೇಹಲ್ ಹರಿಕಂತ್ರ ನಾಪತ್ರ ಸಲ್ಲಿಸಿದ್ದರು.
ಕೈ ಎತ್ತುವ ಮೂಲಕ ಚುನಾವಣೆ ನಡೆಯಿತು. ಮೈತ್ರಿ ಅಭ್ಯರ್ಥಿಗಳ ಪರವಾಗಿ ಬಿಜೆಪಿಯ 11, ಜೆಡಿಎಸ್‌ನ ಮೂವರು ಹಾಗೂ ಮೂವರು ಪಕ್ಷೇತರರು ಮತ ಚಲಾಯಿಸಿದರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಎಂಎಲ್‌ಸಿ ಗಣಪತಿ ಉಳ್ವೇಕರ್ ಸೇರಿ ಒಟ್ಟು 19 ಮತಗಳನ್ನು ಪಡೆದ ಮೈತ್ರಿ ಅಭ್ಯರ್ಥಿಗಳು ಜಯದ ನಗೆ ಬೀರಿದರು.
ಕಾಂಗ್ರೆಸ್ 11 ಸದಸ್ಯರ ಪೈಕಿ ಸದಸ್ಯ ಮೋಹನ ನಾಯ್ಕ ಗೈರಾಗಿದ್ದರು. ಉಳಿದ 10 ಕಾಂಗ್ರೆಸ್ ಸದಸ್ಯರು, ಜೆಡಿಎಸ್‌ನ ಒಬ್ಬ , ಇಬ್ಬರು ಪಕ್ಷೇತರರು ಹಾಗೂ ಶಾಸಕ ಸತೀಶ ಸೈಲ್ ಸೇರಿ ಒಟ್ಟು 14 ಮತ ಪಡೆದ ಕಾಂಗ್ರೆಸ್ ಅಭ್ಯರ್ಥಿಗಳು ಪರಾಭವಗೊಂಡರು.
ಮೊದಲ ಅವಽಯಲ್ಲೂ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು. ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಮುತುವರ್ಜಿ ವಹಿಸಿದ ಪರಿಣಾಮ ಎರಡನೇ ಅವಽಗೂ ನಗರಸಭೆಯಲ್ಲಿ ಕಮಲ ಅರಳಿಸಿದ್ದಾರೆ.
ಅಧ್ಯಕ್ಷರಾಗಿ ಅಽಕಾರ ಸ್ವೀಕರಿಸಿದ ರವಿರಾಜ ಅಂಕೋಲೆಕರ್, ಎಲ್ಲ ಸದಸ್ಯರ ಸಹಕಾರದಿಂದ ಕಾರವಾರ ನಗರಸಭೆಯನ್ನು ಮಾದರಿಯಾಗಿ ರೂಪಿಸಲು ಯತ್ನಿಸಲಾಗುವುದು ಎಂದರು. ಆಯ್ಕೆಯ ಬಳಿಕ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಗೇಟ್ ಗಲಾಟೆ
ನಗರಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸಣ್ಣ ಗೇಟ್ ಮೂಲಕ ನಗರಸಭೆ ಪ್ರವೇಶಿಸಲು ಪೊಲೀಸರು ಅವಕಾಶ ಮಾಡಿಕೊಟ್ಟಿದ್ದರು. ಆದರೆ, ಶಾಸಕ ಸತೀಶ ಸೈಲ್‌ಗೆ ಎದುರಿನ ದೊಡ್ಡ ಗೇಟ್ ತೆರೆದು ಒಳ ಹೋಗಲು ಅವಕಾಶ ಕಲ್ಪಿಸಲಾಯಿತು. ಸತೀಶ ಸೈಲ್ ಅವರಿಗೆ ಒಂದು ನ್ಯಾಯ ಪೊಲೀಸರಿಗೆ ಒಂದು ನ್ಯಾಯ ಮಾಡಲಾಗುತ್ತಿದೆ ಎಂದು ರೂಪಾಲಿ ನಾಯ್ಕ ಅಸಮಾಧಾನ ಹೊರ ಹಾಕಿದರು.
ದೂರು ಸಲ್ಲಿಕೆ
ಅಽಕಾರ ದಾಹದಿಂದ ಶಾಸಕ ಸತೀಶ ಸೈಲ್ ನಗರಸಭೆ ಸದಸ್ಯರಿಗೆ 25, 30 ಲಕ್ಷದ ಆಮಿಷ ಒಡ್ಡಿದ್ದರು. ಒಬ್ಬರ ಜೀವವನ್ನೂ ಬಲಿ ಪಡೆದರು ಎಂದು ರೂಪಾಲಿ ನಾಯ್ಕ ಆರೋಪಿಸಿದರು. ಅವರ ಹೇಳಿಕೆಯನ್ನು ಖಂಡಿಸಿ ಶಾಸಕ ಸತೀಶ ಸೈಲ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹೃದಯಾಘಾತದಿಂದ ನಿಧನರಾದ ರಾಜು ತಾಂಡೇಲ ಅವರನ್ನು ಕೇಂದ್ರೀಕರಿಸಿ ರೂಪಾಲಿ ನಾಯ್ಕ ಅವರು ಈ ಹೇಳಿಕೆ ನೀಡಿದ್ದಾರೆ. ತಮ್ಮ ವಿರುದ್ಧ ಮೀನುಗಾರರ ಸಮುದಾಯದಲ್ಲಿ ದ್ವೇಷ ಭಾವನೆ ಹುಟ್ಟುವಂತೆ ಮಾಡಿ, ಸಮಾಜದಲ್ಲಿ ಅಶಾಂತಿ ಹುಟ್ಟಿಸಿ, ತಮ್ಮ ಜೀವಕ್ಕೆ ಕುತ್ತು ತರುವ ಹುನ್ನಾರ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆದರೆ, ಪೊಲೀಸರು ಎನ್‌ಸಿ ಮಾತ್ರ ದಾಖಲಿಸಿದ್ದು, ನ್ಯಾಯಾಲಯದ ಅನುಮತಿ ಪಡೆದು ಬರುವಂತೆ ಹಿಂಬರಹ ನೀಡಿದ್ದಾರೆ.
ಪ್ರತಿಷ್ಠಿತ ಕಾರವಾರ ನಗರಸಭೆಯ ಅಽಕಾರವನ್ನು ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು ಹಿಡಿದಿವೆ. ನಗರದ ಅಭಿವೃದ್ಧಿಗೆ ಎಲ್ಲ ರೀತಿಯಿಂದ ಶ್ರಮಿಸಲು ನಾನು ಬೆಂಬಲ ನೀಡಲಿದ್ದೇನೆ. ಸರ್ಕಾರ ನಗರ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಹೆಚ್ಚಿಸಬೇಕು.ವಿಶ್ವೇಶ್ವರ ಹೆಗಡೆ ಕಾಗೇರಿಸಂಸದ https://www.vijayavani.net/kumat-cmc-election-highcort-stay https://www.vijayavani.net/kumat-cmc-election-highcort-stay