ಪುತ್ತೂರು: ಶಾರದ ಕುಟುಂಬ ವಿಕಸನ ಮಂಡಳಿ ಹಾಗೂ ಕೆ.ಸಿ.ಇ ಆರ್ಗನೈಸೇಷನ್ ದ.ಕ ಪುತ್ತೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಯೋಗದೊಂದಿಗೆ ತಾಲೂಕುಮಟ್ಟದಲ್ಲಿ ಆನ್‌ಲೈನ್ ಮೂಲಕ ನಡೆದ ಏಕಪಾತ್ರ ಅಭಿನಯದಲ್ಲಿ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ನೆಟ್ಲದ ೬ನೇ ತರಗತಿಯ ವಿದ್ಯಾರ್ಥಿನಿ ಕಾರುಣ್ಯ ಎನ್. ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ನೆಟ್ಲ ಈಶ್ವರ ಕುಲಾಲ್ ಮತ್ತು ನಳಿನಾಕ್ಷಿ ದಂಪತಿಯ ಪುತ್ರಿ.