ಜಿಲ್ಲೆ

ಗುರುಕುಲ ಮಾದರಿ ಶಿಬಿರದಿಂದ ಸಮರ್ಥ ಕಲಿಕೆ : ವಿದ್ಯಾಭೂಷಣ ಅನಿಸಿಕೆ

ಸೌಮ್ಯ ಆರ್

ಬೆಳ್ತಂಗಡಿ: ಸಂಗೀತದ ವಿದ್ಯಾರ್ಥಿಗಳು ಜತೆಯಾಗಿ ಸೇರಿ ಗುರುಕುಲ ಮಾದರಿಯಲ್ಲಿ ಕಲಿಯುವುದರಿಂದ ತಮ್ಮ ಕಲಿಕೆಯನ್ನು ಇನ್ನಷ್ಟು ಸಮರ್ಥವಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ಪ್ರಸಿದ್ಧ ಗಾಯಕ ವಿದ್ಯಾಭೂಷಣ ಹೇಳಿದರು.

ಕರುಂಬಿತ್ತಿಲ್ ವಿದ್ವಾನ್ ವಿಠಲ ರಾಮಮೂರ್ತಿ ಮನೆಯಲ್ಲಿ ‘ಕರುಂಬಿತ್ತಿಲ್ ಸಂಗೀತ’ ಶಿಬಿರ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.

ಕರುಂಬಿತ್ತಿಲ್ ಸಂಗೀತ ಶಿಬಿರದ ಆಯೋಜಕರಾದ ವಿದ್ವಾನ್ ವಿಠಲ ರಾಮಮೂರ್ತಿ ಮಾತನಾಡಿ, 25ನೇ ವರ್ಷದ ಸಂಗೀತ ಶಿಬಿರದ ಯಶಸ್ಸು ಮುಂದಿನ ತಲೆಮಾರಿನಲ್ಲಿ ಮಕ್ಕಳು ಸಂಗೀತದ ಯಾನವನ್ನು ಮುಂದುವರೆಸುತ್ತಾರೆ ಎಂಬ ನಂಬಿಕೆ ಮೂಡಿಸಿದೆ. ಈ ನಿರಂತರ ಪ್ರಯತ್ನಕ್ಕೆ ಕೈಜೋಡಿಸಿದ ಎಲ್ಲರಿಗೂ ಈ ಶಿಬಿರದ ಯಶಸ್ಸು ಸಲ್ಲಬೇಕು ಎಂದು ಹೇಳಿದರು. ವಿದುಷಿ ಕೃಷ್ಣವೇಣಿ ಅಮ್ಮ, ವಿದ್ವಾನ್ ಉಡುಪಿ ಗೋಪಾಲಕೃಷ್ಣನ್, ವಿದ್ವಾನ್ ಶ್ರೀಮುಷ್ಣಂ ರಾಜಾರಾವ್, ವಿದ್ವಾನ್ ನಾಗೈ ಮುರಳೀಧರನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಎಂ.ಆರ್. ಶಿಬಿರಕ್ಕೆ ಶುಭ ಹಾರೈಸಿದರು.

 ಶಿಬಿರದಲ್ಲಿ ಶ್ರೀಲಂಕಾ, ಅಮೆರಿಕ, ಹೈದರಾಬಾದ್, ಹೊಸದಿಲ್ಲಿ, ವಿಶಾಖಪಟ್ಟಣಂ, ಚೆನ್ನೈ, ಕೇರಳ, ಮುಂಬೈ ಸೇರಿದಂತೆ ಹಲವಾರು ಪ್ರದೇಶಗಳಿಂದ ಸುಮಾರು 350ಕ್ಕೂ ಅಧಿಕ ಸಂಗೀತ ವಿದ್ಯಾರ್ಥಿಗಳು ಆಗಮಿಸಿ ಶಿಬಿರದಲ್ಲಿ ಪಾಲ್ಗೊಂಡರು.

ಸಣ್ಣ ಮಟ್ಟಿನಲ್ಲಿ ಆರಂಭವಾದ ಕರುಂಬಿತ್ತಿಲ್ ಸಂಗೀತ ಶಿಬಿರ ಇಂದು ಹಂತ ಹಂತವಾಗಿ ಬೆಳೆದು 25 ವರ್ಷಗಳನ್ನು ಪೂರೈಸಿದೆ. ಶಿಬಿರ ನಿಡ್ಲೆಯ ಗ್ರಾಮೀಣ ಭಾಗದ ಮನೆಯಲ್ಲಿ ನಡೆಯುವುದಾದರೂ ಇಡೀ ಊರಿನ ಸಂಗೀತ ಪ್ರೇಮಿಗಳು ಇಲ್ಲಿ ಒಟ್ಟು ಸೇರಿ ಸಂಭ್ರಮಿಸುತ್ತಿರುವುದು ಅತೀವ ಸಂತೋಷ ನೀಡುತ್ತಿದೆ. -ವಿದ್ವಾನ್ ವಿಠಲ ರಾಮಮೂರ್ತಿ ಸಂಗೀತ ಗುರು https://www.vijayavani.net/campaign-2 \https://www.vijayavani.net/wild-elephant-attack-22