Kartikotsava Mangala at Agni Math 
ಜಿಲ್ಲೆ

ಅಗ್ನಿಮಠದಲ್ಲಿ ಕಾರ್ತಿಕೋತ್ಸವ ಮಂಗಲ

ತಾಳಿಕೋಟೆ: ಸ್ಥಳಿಯ ಅಗ್ನಿಮಠ(ಚರಂತಿಮಠ)ದಲ್ಲಿ 45 ದಿವಸಗಳಿಂದ ಜರುಗಿದ ಕಾರ್ತಿಕ ದೀಪೋತ್ಸವ ಶುಕ್ರವಾರ ಮಂಗಲಗೊಂಡಿತು.

ಕಾರ್ಯಕ್ರಮದ ಅಂಗವಾಗಿ ಲಿಂ.ಶಾಂತವೀರ ಶಿವಯೋಗಿಗಳ ಹಾಗೂ ಮುರುಂದ್ರ ಶಿವಯೋಗಿಗಳ ಗದ್ದುಗೆಗಳಿಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ಜರುಗಿತು.

ಶ್ರೀಮಠದ ಪೀಠಾಧಿಪತಿ ಶಿವಯೋಗಿ ಶಿವಾಚಾರ್ಯ(ಚರಂತಿಮಠ) ಅವರು ಮಾತನಾಡಿ, ಕಾರ್ತಿಕ ಮಾಸ ಎಲ್ಲೆರಲ್ಲೂ ಭಕ್ತಿ ಹೆಚ್ಚಿಸಿ ಸತ್ಕಾರ್ಯಕ್ಕೆ ಪ್ರೇರಣೆ ನೀಡುತ್ತದೆೆ ಎಂದರು.

ಸಂಗಯ್ಯ ಚರಂತಿಮಠ, ಪರಮಯ್ಯ ಹಿರೇಮಠ, ಶರಬಯ್ಯ ಪುರಾಣಿಕಮಠ, ವಿರುಪಾಗೌಡ ಪಾಟೀಲ, ರಾಜು ಅಲ್ಲಾಪೂರ, ಶರಣು ಬಿಳೇಭಾವಿ, ಸಿದ್ದನಗೌಡ ಮದರಕಲ್ಲ, ಸುಭಾಸ ಅಲ್ಲಾಪೂರ, ನೀಲಕಂಠ ಬಬಲೇಶ್ವರ, ಶಂಕರ ಹಿರೇಮಠ, ಶಂಭು ಹಂದಿಗನೂರ, ಈರಣ್ಣ ಸಜ್ಜನ, ಶರಣಪ್ಪ ಪಾಲ್ಕಿ, ಮಲ್ಲನಗೌಡ ಇತರರಿದ್ದರು.