ಜಿಲ್ಲೆ

ನಗರದಲ್ಲಿ ಸಂಭ್ರಮದ ಕಾತಿರ್ಕೋತ್ಸವ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ನಗರದ ಶಿವಬಸವ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ಕಾತಿರ್ಕೋತ್ಸವ ಕಾರ್ಯಕ್ರಮ ಸಂಭ್ರಮ ಸಡಗರದಿಂದ ಜರುಗಿತು.
ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ ಮುಕ್ಕಣ್ಣೇಶ್ವರ ಮಠದ ಶಂಕರಾನಂದ ಶ್ರೀಗಳು, ಮನುಷ್ಯನಲ್ಲಿ ಹುದುಗಿರುವ ದುರ್ಗುಣಗಳನ್ನು ತೊಲಗಿಸಿ ಸದ್ಗುಣಗಳತ್ತ ಕೊಂಡೊಯ್ಯುವ ದೀಪ ಬೆಳಗುವ ಹಬ್ಬವನ್ನು ಕಾತಿರ್ಕೋತ್ಸವ ಎಂದು ಹೇಳಲಾಗುತ್ತದೆ. ಇಂತಹ ಜ್ಯೋತಿ ಬೆಳಗುವ ಹಬ್ಬಗಳನ್ನು ಪುರಾತನ ಕಾಲದಿಂದಲೂ ಆಚರಿಸುವ ಸಂಪ್ರದಾಯ ನಮ್ಮ ಭಾರತದಲ್ಲಿದೆ. ಇತರೆ ದೇಶಗಳ ಸಂಸತಿಗಿಂತ ನಮ್ಮ ದೇಶದ ಸಂಸತಿ ಸಂಪ್ರದಾಯ ಮಾದರಿಯಾಗಿದೆ. ಪ್ರತಿಯೊಂದು ಗುಡಿಯಲ್ಲೂ ಮಹಿಳೆಯರು ಭಕ್ತಿ ಶ್ರದ್ಧೆಯಿಂದ ಹಬ್ಬದಲ್ಲಿ ಪಾಲ್ಗೊಂಡು ಜ್ಯೋತಿ ಬೆಳಗುವ ಮೂಲಕ ದುಷ್ಟ ಶಕ್ತಿಗಳನ್ನು ಹೋಗಲಾಡಿಸಲು ಯಶಸ್ವಿ ಕಂಡಿದ್ದಾರೆ. ಇತ್ತೀಚಿಗೆ ಇಂತಹ ಧಾಮಿರ್ಕ ಹಬ್ಬಗಳನ್ನು ಆಚರಿಸುವ ಮೂಲಕ ನಗರದಲ್ಲಿ ಒಮ್ಮತ ಮೂಡಿಸಿರುವುದು ಶ್ಲಾನೀಯ ಎಂದರು.
ದೇವಸ್ಥಾನದ ಗೌರವಾಧ್ಯಕ್ಷ ಎಂ. ಟಿ. ಸೂರಿ, ಶಿವಶಂಕರ ಕೋತಂಬರಿ, ಶಿದ್ರಾಮಶೆಟ್ಟಿ, ರಾಮಣ್ಣ ಮಡಿವಾಳರ, ಸವಿತಾ ದಂಡಿನ, ಶಿವರಾಮ ಕೊಳ್ಳಿ, ಪುರುಷೋತ್ತಮ ಇನಾಮದಾರ, ಬಸವರಾಜ ಚೌಡಕಿ, ವಿಜಯ ಮಹಾಂತೇಶ ಹೊಸಮಠ, ಪ್ರಭು ಜಾಲಿಹಾಳ, ಐ. ಕೆ. ಕಮ್ಮಾರ ಹಲವರು ಇದ್ದರು.