ಜಿಲ್ಲೆ

ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದವನ ಬಂಧನ

ಕೊಳ್ಳೇಗಾಲ: ಪಟ್ಟಣ ಪೊಲೀಸ್ ಠಾಣೆಯಲ್ಲಿದ್ದ ಪಿಎಸ್‌ಐ ಅವರ ಜತೆ ಅಸಭ್ಯವಾಗಿ ವರ್ತಿಸಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದವನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಪಟ್ಟಣದ ಜಿ.ಪಿ.ಮಲ್ಲಪ್ಪಪುರಂ ಬಡಾವಣೆ ನಿವಾಸಿ ಕೆ.ಕೆ ಮೂರ್ತಿ ಅವರ ಪುತ್ರ ದುಷ್ಯಂತ್ (20) ಬಂಧಿತ ಆರೋಪಿ. ಜು.4ರಂದು ರಾತ್ರಿ 10.30ರ ಸಮಯದಲ್ಲಿ ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ವರ್ಷಾ ಊಟ ಮಾಡುತ್ತಿದ್ದಾಗ ಏಕಾಏಕಿ ಕೊಠಡಿಗೆ ನುಗ್ಗಿದ ದುಷ್ಯಂತ್ ಎದುರಿಗಿದ್ದ ಕುರ್ಚಿಯಲ್ಲಿ ಕಾಲ ಮೇಲೆ ಕಾಲು ಹಾಕಿ ಕುಳಿತು ಕೊಂಡು ಅಸಭ್ಯವಾಗಿ ವರ್ತಿಸಿ ಕರ್ತವ್ಯಕ್ಕೆ ಪಡ್ಡಿಪಡಿಸಿದ್ದ. ಈ ಹಿನ್ನೆಲೆ ಪಟ್ಟಣ ಪೊಲೀಸ್ ಠಾಣೆಗೆ ಪಿಎಸ್‌ಐ ವರ್ಷಾ ದೂರು ನೀಡಿದ್ದು. ಈ ಸಂಬಂಧ ಪ್ರಕರಣ ದಾಖಲಾಗಿತ್ತು.

ನಂತರ ಆರೋಪಿ ತಲೆ ಮರೆಸಿಕೊಂಡಿದ್ದನು. ಮೈಸೂರಿನಲ್ಲಿದ್ದ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿ, ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಡಿವೈಎಸ್ಪಿ ಎಂ.ಧಮೇಂದ್ರ ತಿಳಿಸಿದ್ದಾರೆ.