ಜಿಲ್ಲೆ

ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮ

ಹುಬ್ಬಳ್ಳಿ : ನಗರದ ಸ್ವರ ಸಾಧನಾ ವೇದಿಕೆ (ಹವ್ಯಾಸಿ ಗಾಯಕರ ತಂಡ) ಆಶ್ರಯದಲ್ಲಿ ಖ್ಯಾತ ಹಿನ್ನಲೆ ಗಾಯಕ ದಿ. ಮೊಹಮ್ಮದ ರಫೀ ಅವರ 43ನೇ ಪುಣ್ಯ ತಿಥಿ ನಿಮಿತ್ತ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಜು. 30ರಂದು ಸಂಜೆ 5 ಗಂಟೆಗೆ ಗೋಕುಲ ರಸ್ತೆಯ ಹೊಸ ಕೋರ್ಟ್ ಬಿಲ್ಡಿಂಗ್ ಸಮೀಪ ಜವಳಿ ಗಾರ್ಡನ್ ಎದುರಿನ ಎಕ್ಸಲೆಂಟ್ ಕರೋಕೆ ಸ್ಟುಡಿಯೋದಲ್ಲಿ ಆಯೋಜಿಸಲಾಗಿದೆ.

ಉದ್ಯಮಿ ಸಂತೋಷ ಶೆಟ್ಟಿ ಉದ್ಘಾಟಿಸುವರು. ಹಿಂದುಸ್ತಾನಿ ಸಂಗೀತ ಗುರುಗಳಾದ ಪಂ. ಆನಂದ ದೇಸಾಯಿ ಅಧ್ಯಕ್ಷತೆ ವಹಿಸುವರು. ವೇದವ್ಯಾಸ ಕೋ-ಆಪ್ ಸೊಸೈಟಿ ಅಧ್ಯಕ್ಷ ಶಂಕರ ಪಾಟೀಲ ಹಾಗೂ ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಟಿ. ಶ್ರೀಧರರಾವ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.