ಜಿಲ್ಲೆ

ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆ: 44 ಅಭ್ಯರ್ಥಿಗಳು ಅಂತಿಮ ಕಣದಲ್ಲಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ 15 ಸ್ಥಾನಗಳ ಚುನಾವಣೆಗೆ ಅಂತಿಮವಾಗಿ 44 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ ಎಂದು ಚುನಾವಣಾಧಿಕಾರಿ ಸಿ.ಎಸ್​. ನೇಗಿನಹಾಳ ತಿಳಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ 4 ಅಭ್ಯರ್ಥಿಗಳು, ಉಪಾಧ್ಯಕ್ಷಕ್ಕೆ 3, ಕಾರ್ಯಾಧ್ಯಕ್ಷಕ್ಕೆ 2, ಕೋಶಾಧ್ಯಕ್ಷಕ್ಕೆ 3, ಪ್ರಧಾನ ಕಾರ್ಯದರ್ಶಿಗೆ 2, ಸಹ ಕಾರ್ಯದರ್ಶಿಗೆ 2, ಕಾರ್ಯಕಾರಿ ಸಮಿತಿ ಸಾಮಾನ್ಯ ಸ್ಥಾನಕ್ಕೆ 20, ಮಹಿಳಾ ಮೀಸಲು ಸ್ಥಾನಕ್ಕೆ 3 ಹಾಗೂ ಎಸ್​ಸಿ, ಎಸ್​ಟಿ ಮೀಸಲು ಸ್ಥಾನಕ್ಕೆ 5 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಚುನಾವಣೆಗೆ ಸಲ್ಲಿಸಿದ ನಾಮಪತ್ರ ಹಿಂಪಡೆಯಲು ಕೊನೇ ದಿನವಾದ ಶುಕ್ರವಾರದಂದು 6 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಡಾ. ವಿ.ಬಿ. ರಾಜೂರ, ಗುರುರಾಜ ಗುಣಸಿಮರದ, ಪರಮೇಶ್ವರ ಕಾಳೆ, ನಿಂಗಣ್ಣ ಕುಂಟಿ, ಕಾರ್ಯಾಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ಹನುಮಾಕ್ಷಿ ಗೋಗಿ ಹಾಗೂ ಕಾರ್ಯಕಾರಿ ಎಸ್​ಸಿ, ಎಸ್​ಟಿ ಮೀಸಲು ಸ್ಥಾನದಿಂದ ಡಾ. ಅನಿಲ ಮೇತ್ರಿ ನಾಮಪತ್ರಗಳನ್ನು ಹಿಂಪಡೆದಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.