ಜಿಲ್ಲೆ

ಕನಾಟಕ ವಿವಿಗೆ ಮತ್ತೊಬ್ಬ ಪ್ರಭಾರಿ ಕುಲಪತಿ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಪ್ರತಿಷ್ಠಿತ ಕನಾಟಕ ವಿಶ್ವವಿದ್ಯಾಲಯ ಪ್ರಭಾರ ಕುಲಪತಿಯಾಗಿ ವಾಣಿಜ್ಯಶಾಸ್ತç ವಿಭಾಗದ ಹಿರಿಯ ಡೀನ್ ಡಾ. ಆರ್.ಎಲ್. ಹೈದ್ರಾಬಾದ್ ಶನಿವಾರ ಅಧಿಕಾರ ವಹಿಸಿಕೊಂಡರು. ನಿರ್ಗಮಿತ ಪ್ರಭಾರ ಕುಲಪತಿ ಎಸ್. ಜಯಶ್ರೀ ಅವರು ಡಾ. ಹೈದ್ರಾಬಾದ್ ಅವರಿಗೆ ಅಽಕಾರ ಹಸ್ತಾಂತರಿಸಿದರು.

ಪ್ರೊ. ಕೆ.ಬಿ. ಗುಡಸಿ 4 ವರ್ಷ ಕಾಯಂ ಕುಲಪತಿಯಾಗಿದ್ದೇ ಕೊನೆ. ಅವರು 2024ರ ಸೆ. 25ರಂದು ನಿವೃತ್ತರಾದ ಬಳಿಕ ವಿಶ್ವವಿದ್ಯಾಲಯ 4ನೇ ಪ್ರಭಾರ ಕುಲಪತಿಯನ್ನು ಕಂಡಿದೆ. ಡಾ. ಮಂಜುಳಾ ಎಸ್.ಆರ್., ಡಾ. ಬಿ.ಎಂ. ಪಾಟೀಲ, ಡಾ. ಜಯಶ್ರೀ ಎಸ್. ಅವರ ಪ್ರಭಾರ ಅಽಕಾರದ ನಂತರ ಡಾ. ಆರ್.ಎಲ್. ಹೈದ್ರಾಬಾದ್ ನೇಮಕಗೊಂಡಿದ್ದಾರೆ. ಇವರು ಈ ಮೊದಲು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಯಾಗಿದ್ದರು.