ಜಿಲ್ಲೆ

ಏತ ನೀರಾವರಿ ಯೋಜನೆಗೆ ಎಲ್ಲ ಪಕ್ಷದ ಕೊಡುಗೆ ಇದೆ ಎಂದ ಎಂಎಲ್ಸಿ ಗೋಪಾಲಸ್ವಾಮಿ

ಹಾಸನ: ಚನ್ನರಾಯಪಟ್ಟಣ ತಾಲೂಕಿನ ಏತನೀರಾವರಿ ಯೋಜನೆಗಳಿಗೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಯ ಎಲ್ಲ ನಾಯಕರ ಕೊಡುಗೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಹೇಳಿದರು.

ತಾಲೂಕಿನ ಸಮುದ್ರಹಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀ ಮುನೇಶ್ವರಸ್ವಾಮಿ ದೇಗುಲವನ್ನು ಉದ್ಘಾಟನೆಗೊಳಿಸಿ ಧಾರ್ಮಿಕ ಕಾರ್ಯಕ್ರಮಗಳಿಗೆ ಸೋಮವಾರ ಚಾಲನೆ ನೀಡಿ, ಏತನೀರಾವರಿ ವಿಚಾರದಲ್ಲಿ ಯಾವುದೇ ರಾಜಕೀಯ ಬೇಡಾ ಎಂದರು.

ನುಗ್ಗೇಹಳ್ಳಿ ಪುರವರ್ಗ ಹಿರೇಮಠದ ಶ್ರೀ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾರಾಣಿ, ಜೆಡಿಎಸ್ ತಾಲೂಕು ಅಧ್ಯಕ್ಷ ಪರಮದ ದೇವರಾಜೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಪ್ರಮುಖರಾದ ಗೀತಾ ಗೋಪಾಲಸ್ವಾಮಿ, ಗುಡಿಗೌಡ ಶಿವಲಿಂಗೇಗೌಡ, ಮುಖಂಡರಾದ ನಂಜೇಗೌಡ, ಎಸ್.ಬಿ.ಗೋವಿಂದೇಗೌಡ
ಹಾಗೂ ಇತರರು ಇದ್ದರು.