ಜಿಲ್ಲೆ

ಕೇಂದ್ರದಿಂದ ಅಗತ್ಯ ನೆರವು ಪಡೆಯುವಲ್ಲಿ ರಾಜ್ಯ ಸರ್ಕಾರವೇ ವಿಫಲ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಸಕಾಲಕ್ಕೆ ನಿಯಮಾನುಸಾರ ಪ್ರಸ್ತಾವನೆಗಳನ್ನು ಸಲ್ಲಿಸಿ ಯೋಜನೆಗಳ ಮೂಲಕ ನೆರವು ಪಡೆಯುವಲ್ಲಿ ರಾಜ್ಯ ಸರ್ಕಾರವು ವಿಫಲವಾಗಿದೆ ಎಂದು ಸಂಸದ ಡಾ ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರದಿAದ ರಾಜ್ಯಕ್ಕೆ ಯಾವುದೇ ಅನ್ಯಾಯವಾಗುತ್ತಿಲ್ಲ. ಕೋಟ್ಯಂತರ ರೂ ಅನುದಾನ ಬಿಡುಗಡೆಯಾಗುತ್ತಿದೆ. ಆದರೆ, ಇದನ್ನು ಖರ್ಚು ಮಾಡಿ ಲೆಕ್ಕ ತೋರಿಸುವ ಕೆಲಸವಾಗುತ್ತಿಲ್ಲ. ಹೊಸ ಯೋಜನೆಗಳಡಿ ಪ್ರಸ್ತಾವನೆಗಳ ಸಲ್ಲಿಕೆಯಾಗುತ್ತಿಲ್ಲ. ಪರಿಶಿಷ್ಟ ವರ್ಗಗಳ ಇಲಾಖೆಯಡಿ ೭೦ ಸಾವಿರ ಕೋಟಿ ರೂ ಮೀಸಲಿಟ್ಟ ಅನುದಾನ ಪೈಕಿ ಅಗತ್ಯ ನೆರವನ್ನು ಕರ್ನಾಟಕದಿಂದ ಪಡೆಯಲಾಗಿಲ್ಲ. ಇದರ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳೇ ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದು ಬೇಸರಿಸಿದ್ದಾರೆ.  
ಕೈಗಾರಿಕಾ ಪಾರ್ಕ್ಗಳನ್ನು ನಿರ್ಮಿಸಿದ್ದಾರೆಯೇ ಹೊರತು ಕಾರ್ಖಾನೆಗಳು ನಿಮಾರ್ಣವಾಗಿಲ್ಲ. ರಿಯಲ್ ಎಸ್ಟೇಟ್ ದಂಧೆ ನಡೆಯುತ್ತಿದ್ದು ರೈತರಿಂದ ಫಲವತ್ತಾದ ಭೂಮಿಯನ್ನು ಪಡೆದು, ಕೋಟ್ಯಂತರ ರೂಗಳಿಗೆ ಮಾರಲಾಗುತ್ತಿದೆ. ರೈತರ ಬದುಕಿನ ಜತೆ ಆಟವಾಡುತ್ತಿರುವ ಸರ್ಕಾರಕ್ಕೆ ರೈತರ ಶಾಪ ತಟ್ಟಲಿದೆ ಎಂದು ಕಿಡಿಕಾರಿದ್ದಾರೆ.  
ಅನುದಾನದ ಕೊರತೆಯಿಂದ ೯ ವಿಶ್ವ ವಿದ್ಯಾಲಯಗಳನ್ನು ಮುಚ್ಚಲಾಗಿದೆ. ಇದು ಉನ್ನತ ಶಿಕ್ಷಣ ಸಚಿವರ ಸಾಧನೆ. ಇಲ್ಲಿ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ೮೧೦ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದ ಮೆಡಿಕಲ್ ಕಾಲೇಜ್ ಹಾಗೂ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯಕಿಯ ಉಪಕರಣಗಳನ್ನು ಪೂರೈಸಿಲ್ಲ. ಖಾಸಗಿ ಕಂಪನಿಗಳ ಲಾಭಿಗೆ ಮಣಿದು ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧ ಕೇಂದ್ರಗಳನ್ನು ಮುಚ್ಚುತ್ತಿರುವುದು ಜನಪರ ಕೆಲಸವೇ? ಎಂದು ವ್ಯಂಗ್ಯವಾಡಿದ್ದಾರೆ.  
ಬೆಲೆ ಕುಸಿತದಿಂದ ಮಾವು ಹಾಗೂ ದ್ರಾಕ್ಷಿ ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ. ಇದಕ್ಕೆ ಆಂಧ್ರಪ್ರದೇಶದಲ್ಲಿ ಮಾದರಿಯಲ್ಲಿ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಬಸ್ ಟಿಕೆಟ್ ದರ, ಹಾಲಿನ ದರ, ಅಬಕಾರಿ ಸುಂಕ ಎಲ್ಲವೂ ಹೆಚ್ಚಿದ್ದರೂ ಅಭಿವೃದ್ಧಿ ಮಾತ್ರ ಕುಂಠಿತವಾಗಿದೆ. ಕರ್ನಾಟಕದಲ್ಲಿ ಸರ್ಕಾರವು ಐಸಿಯುನಲ್ಲಿದೆ. ಇದಕ್ಕೆ ಬದುಕಿರುವುದನ್ನು ತೋರಿಸಿಕೊಳ್ಳಲು ಕಲಬುರ್ಗಿ, ಮಲೆ ಮಹದೇಶ್ವರ ಬೆಟ್ಟದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲಾಗಿದೆ. ಇದರ ನಡುವೆ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ತೃಪ್ತಿ ತಂದಿಲ್ಲ ಎಂದಿದ್ದರೆ, ಕರ್ನಾಟಕದಲ್ಲಿ ನಂ.೧ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಬಸವರಾಜ ರಾಯರೆಡ್ಡಿ ಹೇಳಿದ್ದರು. ಹೀಗೆ ಅವರ ಪಕ್ಷದವರೇ ಆಡಳಿತ ವ್ಯವಸ್ಥೆಯನ್ನು ತೆಗಳುತ್ತಿದ್ದಾರೆ ಎಂದು ಸಂಸದರು ವ್ಯಂಗ್ಯವಾಡಿದ್ದಾರೆ.