ಜಿಲ್ಲೆ

ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ

ಬೆಂಗಳೂರು: ಶ್ರೀ ರಾಮ ಲಲಿತ ಕಲಾ ಮಂದಿರವು ಶನಿವಾರ ಮತ್ತು ಭಾನುವಾರ (ಆ.31, ಸೆ.1) ಬನಶಂಕರಿ 2ನೇ ಹಂತದಲ್ಲಿನ ಮಂದಿರದ ಸಭಾಂಗಣದಲ್ಲಿ ಸಂಜೆ 5.30ಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಆಯೋಜಿಸಿದೆ. ಶನಿವಾರ ವಿದ್ವಾನ್ ಪಟ್ಟಾಭಿರಾಮ ಪಂಡಿತ್ ಗಾಯನ ಪ್ರಸ್ತುತಪಡಿಸಲಿದ್ದು, ಟಿ.ವಿ. ರಾಮಾನುಜಾಚಾರ್ಯಲು (ಪಿಟೀಲು), ವಿ. ಪಾಲಕ್ಕಾಡ್ ಮಹೇಶ್‌ಕುಮಾರ್ (ಮೃದಂಗ) ಹಾಗೂ. ವಿ. ರಂಗನಾಥ ಚಕ್ರವರ್ತಿ (ಘಟ) ಸಾಥ್ ನೀಡಲಿದ್ದಾರೆ. ಸೆ.1ರಂದು ಧನುಷ್ ಅನಂತರಾಮನ್ ಗಾಯನಕ್ಕೆ ಜನಾರ್ದನ್ ಶ್ರೀನಾಥ್ (ಪಿಟೀಲು), ಅನಿರುದ್ಧ ಎಸ್. ಭಟ್ (ಮೃದಂಗ) ಹಾಗೂ ಭಾಗ್ಯಲಕ್ಷ್ಮೀ ಕೃಷ್ಣ (ಮೋರ್ಸಿಂಗ್) ವಾದ್ಯ ಸಹಕಾರ ನೀಡಲಿದ್ದಾರೆ.