ಜಿಲ್ಲೆ

ಲಂಕೇಶ್ ಅಧ್ಯಯನ ಶಿಬಿರಕ್ಕೆ ಅರ್ಜಿ

ಪಂಕಜ ಕೆ.ಎಂ.

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕನ್ನಡ ಜಾಣ- ಜಾಣೆಯರ ವೇದಿಕೆ ಸಹಯೋಗದಲ್ಲಿ ಪಿ. ಲಂಕೇಶ್ ಕೃತಿಗಳ ಅಧ್ಯಯನ ಶಿಬಿರ ನಡೆಸಲು ಉದ್ದೇಶಿಸಿದೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ ಹಾಸನ ಜಿಲ್ಲೆಯಲ್ಲಿ ರಾಜ್ಯಮಟ್ಟದ ಶಿಬಿರ ಆಯೋಜಿಸಲಾಗುವ ಶಿಬಿರದಲ್ಲಿ ಭಾಗವಹಿಸಲಿ ಇಚ್ಚಿಸುವ 20-40 ವಯೋಮಾನದವರು ಆ. 17ರೊಳಗೆ ಅರ್ಜಿ ಸಲ್ಲಿಸಬೇಕು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್‌ಸೈಟ್ http://karnatakasahityaacademy.org ನಲ್ಲಿ ಅರ್ಜಿ ಹಾಗೂ ವಿವರಗಳು ಲಭ್ಯವಿದೆ ಎಂದು ರಿಜಿಸ್ಟ್ರಾರ್ ಎನ್. ಕರಿಯಪ್ಪ ತಿಳಿಸಿದ್ದಾರೆ.