ಸಿಂಧನೂರಿನ ತಹಸಿಲ್ ಕಚೇರಿಯ ಶಿರಸ್ತೇದಾರ್ ಚಂದ್ರಶೇಖರಗೆ ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳು ಮನವಿ ಸಲ್ಲಿಸಿದರು. ಪ್ರಮುಖರಾದ ಮಂಜುನಾಥ, ಚಾಗೇಶ, ಬಸವಲಿಂಗ, ಗಂಗಪ್ಪ ಇದ್ದರು. 
ಜಿಲ್ಲೆ

ವಿಕಾಸ ಕಿಶೋರ್‌ರನ್ನು ವರ್ಗಾವಣೆ ಮಾಡಬೇಡಿ

ಪ್ರವೀಣ ಉದುಸಾ ದಲಬಂಜನ್

ಸಿಂಧನೂರು: ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಕಾರ್ಯದರ್ಶಿಯನ್ನಾಗಿ ವಿಕಾಸ ಕಿಶೋರ್ ಸುರಳಿಕರ್‌ರನ್ನು ಮುಂದುವರಿಸಲು ಒತ್ತಾಯಿಸಿ ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳು ನಗರದ ತಹಸಿಲ್ ಕಚೇರಿ ಶಿರಸ್ತೇದಾರ್ ಚಂದ್ರಶೇಖರಗೆ ಗುರುವಾರ ಮನವಿ ಸಲ್ಲಿಸಿದರು.

ಪ್ರಾಮಾಣಿಕವಾಗಿ ತ್ವರಿತ ಗತಿಯಲ್ಲಿ ನೇಮಕಾತಿ ಮಾಡಿದ ಕೀರ್ತಿ

ದಕ್ಷ, ಪ್ರಾಮಾಣಿಕ ಅಧಿಕಾರಿ ವಿಕಾಸ ಕಿಶೋರ್ ಸುರಳಿಕರ್‌ರನ್ನು ವರ್ಗಾವಣೆ ಮಾಡುತ್ತಿರುವುದು ಸರಿಯಲ್ಲ. ಅವರ ಅವಧಿಯಲ್ಲಿ ಹಲವು ಹುದ್ದೆಗಳಿಗೆ ಪ್ರಾಮಾಣಿಕವಾಗಿ ತ್ವರಿತ ಗತಿಯಲ್ಲಿ ನೇಮಕಾತಿ ಮಾಡಿದ್ದಾರೆ. ಇಂತಹ ಅಧಿಕಾರಿಯನ್ನು ವರ್ಗಾವಣೆ ಮಾಡಬಾರದು. ಹಾಗಾಗಿ ವಿಕಾಸ ಕಿಶೋರ್ ಅವರನ್ನು ಕೆಪಿಎಸ್‌ಸಿ ಕಾರ್ಯದರ್ಶಿಯನ್ನಾಗಿ ಮರು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:

ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಾದ ಮಂಜುನಾಥ, ಚಾಗೇಶ, ಬಸವಲಿಂಗ, ಯಮುನಾ, ಈಶ್ವರಿ, ಗಂಗಪ್ಪ, ರೋಜಾ, ಗಂಗಮ್ಮ, ಅಶ್ವಿನಿ, ಭವಾನಿ, ಚೈತ್ರಾ, ಲಕ್ಷ್ಮಣ, ಕೆ.ವಿಶ್ವನಾಥ, ಲಂಕೇಶ ಇದ್ದರು.