ಜಿಲ್ಲೆ

ಕೆಎಂಸಿ ನೂತನ ಪದಾಧಿಕಾರಿಗಳ ಆಯ್ಕೆ

ಪಂಕಜ ಕೆ.ಎಂ.

ಬೆಂಗಳೂರು: ಕರ್ನಾಟಕ ವೈದ್ಯಕೀಯ ಪರಿಷತ್ತಿನ (ಕೆಎಂಸಿ) ಅಧ್ಯಕ್ಷರಾಗಿ ಡಾ. ವೈ. ಸಿ. ಯೋಗಾನಂದ ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಡಾ.ಕೆ. ರವಿ ಚುನಾಯಿತರಾಗಿದ್ದಾರೆ.

ಪರಿಷತ್ತಿನ ನೂತ ಕಾರ್ಯಕಾರಿ ಸಮಿತಿಗೆ 2024ರಿಂದ 2029ರ ಅವಧಿಗೆ ಜುಲೈ 2ರಂದು ನಡೆದ ಚುನಾವಣೆಯಲ್ಲಿ ಈ ಆಯ್ಕೆ ಮಾಡಲಾಗಿದೆ.

ಕಂದಾಯ ವಿಭಾಗವಾರು ಆಯ್ಕೆ: ಕಲಬುರಗಿ ವಿಭಾಗದಿಂದ ಡಾ.ವೈ.ಸಿ. ಯೋಗಾನಂದ ರೆಡ್ಡಿ, ಡಾ.ಶರಣಬಸಪ್ಪ ಎಸ್. ಕಾರಭಾರಿ, ಡಾ. ಶಾಂತೇಶ್ ಪಾಟೀಲ, ಬೆಳಗಾವಿ ವಿಭಾಗದಿಂದ ಡಾ. ಸುಧೀರ್ ಆರ್. ಜಂಬಗಿ, ಡಾ.ಪವನಕುಮಾರ ಎನ್. ಪಾಟೀಲ, ಡಾ.ಸೊರಗಾವಿ ವೆಂಕಟೇಶ ರಾಮಪ್ಪ, ಬೆಂಗಳೂರು ವಿಭಾಗದಿಂದ ಡಾ. ಎನ್. ರವಿ, ಡಾ. ಟಿ.ಎ. ವೀರಭದ್ರಯ್ಯ, ಡಾ. ಆರ್. ರವೀಂದ್ರ, ಮೈಸೂರು ವಿಭಾಗದಿಂದ ಡಾ. ಹೊನ್ನೇಗೌಡ, ಡಾ. ರವಿ ಕೃಷ್ಣಪ್ಪ ಹಾಗೂ ಡಾ. ಎಚ್.ಎನ್. ರವೀಂದ್ರ ಚುನಾಯಿತರಾಗಿದ್ದಾರೆ.

ನಾಲ್ಕು ವಿಭಾಗಗಳಿಂದ ಡಾ.ಶಿವಾನಂದ ಎಸ್. ಭೀಮಳ್ಳಿ, ಡಾ.ಸಂತೋಷ ಡಿ. ಪಾಟೀಲ, ಡಾ.ಚೈತ್ರ ವಿ. ಆನಂದ್, ಡಾ. ಡಿ. ಭರತ್ ಕುಮಾರ್ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ ಎಂದು ಪರಿಷತ್ತಿನ ರಿಜಿಸ್ಟ್ರಾರ್ ಡಾ. ಶಾಮರಾವ್ ಬಿ. ಪಾಟಿಲ್ ತಿಳಿಸಿದ್ದಾರೆ.