ಬೆಂಗಳೂರು: ಕರೊನಾ ಸೋಂಕಿನಿಂದ ಸಂಕಷ್ಟ ಎದುರಿಸುತ್ತಿರುವ ಇಥಿಯೋಪಿಯಾದಲ್ಲಿನ ಭಾರತೀಯರಿಗೆ ಕನ್ನಡಿಗ ಸಂತೋಷ್ ಸಹಾಯಹಸ್ತ ಚಾಚಿದ್ದಾರೆ.
ಮೆಕಾನಿಕಲ್ ಇಂಜಿನಿಯರಿಂಗ್ನಲ್ಲಿ ಎಂಇ ವ್ಯಾಸಂಗ ಮಾಡಿರುವ ಸಂತೋಷ್ ಇಥಿಯೋಪಿಯಾದಲ್ಲಿ ನೆಲೆಸಿದ್ದು, ಅಲ್ಲಿನ ನೂರಾರು ಭಾರತೀಯರಿಗೆ 5 ಕೆ.ಜಿ. ಅಕ್ಕಿ, 25 ಕೆ.ಜಿ. ಗೋಧಿ ಹಿಟ್ಟು, 5 ಲೀಟರ್ ತೈಲವನ್ನು ವಿತರಣೆ ಮಾಡಿದ್ದಾರೆ.
ಕರೊನಾ ನಿಯಂತ್ರಣಕ್ಕೆ ಸ್ಥಳೀಯ ಆಡಳಿತ ಸಂಪೂರ್ಣ ಸಹಕಾರ ನೀಡುತ್ತಿದೆ. ಆಹಾರ ಸಾಮಗ್ರಿ ನೀಡುವುದರ ಜತೆಗೆ ಕರೊನಾ ನಿಯಂತ್ರಣಕ್ಕೆ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನೂ ತಿಳಿಸಿ ಕೊಡುತ್ತಿದ್ದೇವೆ ಎಂದು ಸಂತೋಷ್ ತಿಳಿಸಿದ್ದಾರೆ.