ಜಿಲ್ಲೆ

ಅಂಧ ಕ್ರಿಕೆಟ್ ಆಟಗಾರರನ್ನು ಅಭಿನಂದಿಸಿದ ರಾಜ್ಯಪಾಲ

ಆರ್.ತುಳಸಿಕುಮಾರ್

ಬೆಂಗಳೂರು: ಐಬಿಎಸ್‌ಎ ವಿಶ್ವ ಕ್ರಿಕೆಟ್ ಪಂದ್ಯಾವಳಿಗಳಲ್ಲಿ (ಕ್ರಿಕೆಟ್ ಫಾರ್ ಬ್ಲೈಂಡ್ ) ಚಿನ್ನದ ಪದಕ ಗೆದ್ದಿರುವ ಭಾರತದ ಮಹಿಳಾ ಅಂಧ ಕ್ರಿಕೆಟ್ ತಂಡಲ್ಲಿರುವ ಕರ್ನಾಟಕದ ಮೂವರು ಆಟಗಾರರನ್ನು ಹಾಗೂ ರಜತ ಪದಕ ಗೆದ್ದಿರುವ ಪುರುಷರ ಕ್ರಿಕೆಟ್ ತಂಡದ ಕರ್ನಾಟಕದ ಮೂವರು ಆಟಗಾರರನ್ನು ರಾಜ್ಯಪಾಲರು ಅಭಿನಂದಿಸಿದರು.

ರಾಜಭವನದಲ್ಲಿ ಶುಕ್ರವಾರ ಅಂಧರ ಕ್ರಿಕೆಟ್ ತಂಡದ ಆಟಗಾರರು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿ ಗೆಲುವಿನ ಸಿಹಿಯನ್ನು ಹಂಚಿಕೊಂಡರು.

ವಿಶ್ವಮಟ್ಟದಲ್ಲಿ ಭಾರತದ ಗೌರವ ಹೆಚ್ಚಿಸಿದ ಭಾರತದ ಅಂಧರ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದ ರಾಜ್ಯಪಾಲರು, ಈ ಗೌರವ ಹೆಚ್ಚಿಸುವಲ್ಲಿ ಕರ್ನಾಟಕದ ಆಟಗಾರರು ಪಾಲುದಾರರಾಗಿರುವುದು ಹೆಮ್ಮೆಯ ಸಂಗತಿ ಎಂದು ಆಟಗಾರರ ಬೆನ್ನು ತಟ್ಟಿದರು.

ನಗದು ಪ್ರೋತ್ಸಾಧನ ಘೋಷಣೆ:

ಭಾರತೀಯ ಅಂಧ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಕರ್ನಾಟಕದ ವರ್ಷಾ.ಯು ಹಾಗೂ ತಂಡದ ಆಟಗಾರರಾದ ದೀಪಿಕಾ, ಗಂಗವ್ವ ಅವರಿಗೆ ತಲಾ 51,000 ರೂ. ಮತ್ತು ಪುರುಷರ ತಂಡದ ಪ್ರಕಾಶ್ ಜೆ, ಸುನೀಲ್ ಕುಮಾರ್, ಬಸಪ್ಪ ಒಡ್ಡಗೋಲ್ ಅವರಿಗೆ ತಲಾ 41, 000 ರೂ. ನಗದು ಪ್ರೋತ್ಸಾಹವನ್ನು ನೀಡಲಾಗುವುದು ಎಂದು ರಾಜ್ಯಪಾಲರು ಘೋಷಿಸಿದರು.