| ರಮೇಶ ದೊಡ್ಡಪುರ ಬೆಂಗಳೂರು
ಪ್ರತಿ ಮನೆಗೂ ಶುದ್ಧ ಕುಡಿಯುವ ನೀರೊದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಪ್ರತಿ ಮನೆಗೆ ನೀರು’ (ಹರ್ ಘರ್ ಜಲ್) ಯೋಜನೆಯ ಜಾರಿಯಲ್ಲಿ ಕರ್ನಾಟಕ ಕೇವಲ ಶೇ.29 ಗುರಿ ಸಾಧಿಸಿದ್ದು, ದೇಶದಲ್ಲಿ 14ನೇ ಸ್ಥಾನದಲ್ಲಿದೆ. ಜನರ ಜೀವನ ಮಟ್ಟ ಸುಧಾರಿಸುವ ಜತೆಗೆ ನೀರಿನಿಂದ ಹರಡುವ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಈ ಯೋಜನೆ ಸಹಕಾರಿ.
ದೇಶದಲ್ಲಿ 14ನೇ ಸ್ಥಾನ: ಪ್ರಧಾನಿ ನರೇಂದ್ರ ಮೋದಿ 2019ರ ಆ.15ರ ಭಾಷಣದಲ್ಲಿ ಜಲಜೀವನ ಅಭಿಯಾನ ಘೋಷಿಸಿ, ದೇಶದ ಸುಮಾರು 19 ಕೋಟಿ
ಕೇವಲ ಶೇ.1 ಪ್ರಗತಿ: 2019ರ ಏ.1ರಲ್ಲಿ ಕರ್ನಾಟಕದ ಶೇ.27.35 ಮನೆಗಳಿಗೆ ಕುಡಿಯುವ ನೀರು ಒದಗಿಸಲಾಗಿತ್ತು. ಅಂದರೆ ಒಂದು ವರ್ಷದಲ್ಲಿ ಕೇವಲ ಶೇ.1 ಸಾಧನೆ ಮಾಡಲಾಗಿದೆ. ಕರೊನಾ ಇನ್ನಿತರೆ ಕಾರಣ ಇದಕ್ಕೆ ನೀಡಲಾಗದು. ಏಕೆಂದರೆ ಕಳೆದ ವರ್ಷ ಶೇ. 28.84ರಲ್ಲಿದ್ದ ತೆಲಂಗಾಣ ಇದೀಗ ಶೇ.98.37ರಲ್ಲಿದೆ. ಗುಜರಾತ್ (ಶೇ. 70.13ರಿಂದ ಶೇ.80), ಬಿಹಾರ (ಶೇ.1.68ರಿಂದ ಶೇ.53.2), ಹರಿಯಾಣ (ಶೇ.56.88ರಿಂದ ಶೇ.76.13) ಸಾಧನೆ ಮಾಡಿವೆ. ರಾಜ್ಯದ ಮಟ್ಟಿಗೆ ಕೊಪ್ಪಳ ಜಿಲ್ಲೆ ಶೇ.99.75 ಮನೆಗಳಿಗೆ ಕುಡಿಯುವ ನೀರನ್ನು ಒದಗಿಸಿರುವುದಾಗಿ ಅಂಕಿ ಅಂಶಗಳು ತಿಳಿಸುತ್ತವೆ. ನಂತರದಲ್ಲಿ ಮಂಡ್ಯ(ಶೇ.55.93), ದಕ್ಷಿಣ ಕನ್ನಡ(ಶೇ. 50.52) ಮುಂತಾದ ಜಿಲ್ಲೆಗಳಿದ್ದು ಹಾಸನ(ಶೇ.15.13) ಹಾಗೂ ಕೊನೆಯದಾಗಿ ಉತ್ತರ ಕನ್ನಡ(ಶೇ. 6.88) ಜಿಲ್ಲೆಯಿದೆ.
ಗ್ರಾಮ ಸ್ವರಾಜ್ಯಕ್ಕೆ ಅಡಿಪಾಯ: ತಮ್ಮ ಗ್ರಾಮದ ನೀರಿನ ಸರಬರಾಜು ಕುರಿತು ಸಂಪೂರ್ಣ ಹೊಣೆಯನ್ನು ಗ್ರಾಮವೇ ಕೈಗೊಳ್ಳುತ್ತದೆ ಎಂಬುದು ಯೋಜನೆಯ ಪ್ರಮುಖ ಅಂಶ. ಗ್ರಾಮದವರೇ ಸದಸ್ಯರಾಗಿರುವ ಸಮಿತಿಯು ಯೋಜನೆಯ ಮೇಲ್ವಿಚಾರಣೆ ನಡೆಸುತ್ತದೆ, ಗ್ರಾಮದ ಒಬ್ಬ ಯುವಕ/ಯುವತಿಗೆ ವ್ಯವಸ್ಥೆ ನಿರ್ವಹಣೆಯ ಉದ್ಯೋಗ ಸೃಷ್ಟಿಯಾಗುತ್ತದೆ. ವ್ಯವಸ್ಥೆಯಲ್ಲಾಗುವ ಸಮಸ್ಯೆಯನ್ನು ತಮ್ಮ ಹಂತದಲ್ಲಿ ಪರಿಹರಿಸುವ ಜತೆಗೆ ನೀರು ಸರಬರಾಜಿನ ಹಾಗೂ ಸಿಬ್ಬಂದಿಯ ವೇತನ ವೆಚ್ಚಕ್ಕೆ ಗ್ರಾಮದಲ್ಲೆ ಸಂಪನ್ಮೂಲ ಸಂಗ್ರಹಿಸಲು ಮಾರ್ಗಸೂಚಿ ಹೊರಡಿಸಲಾಗಿದೆ. ಈ ನಿಟ್ಟಿನಲ್ಲಿ ಈ ಯೋಜನೆಯು ಆಡಳಿತದ ಸಂಪೂರ್ಣ ವಿಕೇಂದ್ರೀಕರಣ ಅಥವಾ ಗ್ರಾಮ ಸ್ವರಾಜ್ಯದ ಪರಿಕಲ್ಪನೆಗೆ ಸನಿಹದಲ್ಲಿದೆ ಎನ್ನಲಾಗುತ್ತಿದೆ.
ಅನೇಕ ಉಪಯೋಗಗಳು: ಪ್ರತಿ ಮನೆಗೆ ನೀರನ್ನು ತಲುಪಿಸುವುದರಿಂದ, ಕುಟುಂಬ ಸದಸ್ಯರ ಸಮಯ ಹಾಗೂ ಶ್ರಮ ಉಳಿತಾಯವಾಗುತ್ತದೆ ಎಂಬುದು ಮೊದಲ ಅನುಕೂಲ. ಇದರ ಜತೆಗೆ, ಪ್ರತಿಕೂಲ ವಾತಾವರಣದಲ್ಲಿ ದೂರದಿಂದ ನೀರು ತರಲು ತೆರಳುವಾಗಿನ ಅನನುಕೂಲದ ಜತೆಗೆ ಕಾಲರಾ, ಡಯೇರಿಯಾ, ಡೀಸೆಂಟ್ರಿ, ಟೈಫಾಯ್್ಡ ನಂತಹ ನೀರಿನಿಂದ ಹರಡುವ ಕಾಯಿಲೆಗಳನ್ನು ತಡೆಯಬಹುದು.
ಜಿಲ್ಲೆಗಳ ಸ್ಥಿತಿ
ಯೋಜನೆ ಜಾರಿಯಲ್ಲಿ ರಾಜ್ಯ ಹಿಂದುಳಿದಿದೆ ಎನ್ನಲಾಗದು. ಯೋಜನೆ ಜಾರಿಯಲ್ಲಿದೆ, ಕ್ಷಿಪ್ರಗೊಳಿಸಲಾಗುತ್ತಿದೆ. 4 ವರ್ಷದಲ್ಲಿ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ತಿಳಿಸಿದ್ದರೂ ನಾವು ಒಂದು ವರ್ಷ ಮೊದಲೇ ಅಂದರೆ 2023ಕ್ಕೇ ರಾಜ್ಯದ ಪ್ರತಿ ಮನೆಗೆ ನೀರು ತಲುಪಿಸುವ ಗುರಿಯೊಂದಿಗೆ ಕಾರ್ಯಪ್ರವೃತ್ತರಾಗಿದ್ದೇವೆ. |ಕೆ.ಎಸ್. ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವ