ಹಿರೇಮುರಾಳದಲ್ಲಿ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಶಾಸಕ ಸಿ.ಎಸ್.ನಾಡಗೌಡ ಅವರನ್ನು ಸನ್ಮಾನಿಸಲಾಯಿತು. ಸಂಗನಬಸಪ್ಪ ತಳೇವಾಡ, ಪಿ.ಬಿ.ಕಾಳಗಿ, ಮಲ್ಲನಗೌಡ ಪಾಟೀಲ, ಎ.ಬಿ.ಬಾಗೇವಾಡಿ, ಎ.ಎಸ್.ಚಂದಾವಾಲೆ, ಈರಣ್ಣ ಪಟ್ಟಣಶೆಟ್ಟಿ, ಸುನೀಲಕುಮಾರ ಜಹಾಗಿರದಾರ ಇತರರಿದ್ದರು.  
ಜಿಲ್ಲೆ

ಕರ್ನಾಟಕದ ಸಹಕಾರ ಕ್ಷೇತ್ರ ದೇಶಕ್ಕೆ ಮಾದರಿ

ಮುದ್ದೇಬಿಹಾಳ: ಕರ್ನಾಟಕದ ಸಹಕಾರ ಕ್ಷೇತ್ರಕ್ಕೆ 120 ವರ್ಷಗಳ ಇತಿಹಾಸವಿದ್ದು ದೇಶಕ್ಕೆ ಮಾದರಿಯಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಪೈಪೋಟಿ ನೀಡುವಲ್ಲಿ ಸಹಕಾರ ಕ್ಷೇತ್ರದ ಡಿಸಿಸಿ, ಪಿಕೆಪಿಎಸ್ ಬ್ಯಾಂಕ್‌ಗಳು ಮುಂಚೂಣಿಯಲ್ಲಿವೆ ಎಂದು ಶಾಸಕ, ಕರ್ನಾಟಕ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಹೇಳಿದರು.

ಹಿರೇಮುರಾಳದ ಶಂಕರ ನೇಕಾರರ ಸಹಕಾರಿ ಸೌಲಭ್ಯ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ, ಸಂಗಮೇಶ್ವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಸಂಘದಲ್ಲಿ ರೈತರಿಗೆ ಕೃಷಿ, ಕೃಷಿ ಉಪಕರಣ, ಮನೆ ಕಟ್ಟಲು, ಕೋಳಿಪಾರಂ, ಪಶುಸಂಗೋಪನೆ ಮುಂತಾದವುಗಳಿಗೆ ನೇರ ಸಾಲ ನೀಡಲಾಗುತ್ತದೆ ಎಂದರು.

ಸಹಕಾರ ಸಂಘಗಳ ನಿವೃತ್ತ ಉಪ ನಿಬಂಧಕ ಪಿ.ಬಿ.ಕಾಳಗಿ, ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಎ.ಎಸ್.ಚಂದಾವಾಲೆ ಹಾಗೂ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಸಂಗನಬಸಪ್ಪ ತಳೆವಾಡ ಮಾತನಾಡಿದರು.

ಸಂಗಮೇಶ್ವರ ಸಹಕಾರ ಸಂಘದ ಅಧ್ಯಕ್ಷ, ತಾಪಂ ಮಾಜಿ ಸದಸ್ಯ ಮಲ್ಲನಗೌಡ ಪಾಟೀಲ ಸೇರಿ ಹಲವು ಸಹಕಾರಿಗಳನ್ನು ಸನ್ಮಾನಿಸಲಾಯಿತು.

ಸಹಕಾರ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ್ ಉತ್ನಾಳ, ಈರಣ್ಣ ಪಟ್ಟಣಶೆಟ್ಟಿ, ಶಶಿಧರ ಬೆಣ್ಣೂರ, ಸುನೀಲಕುಮಾರ ಜಹಾಗೀರದಾರ, ಚಂದ್ರಶೇಖರ ರಾಮೋಡಗಿ, ಶಂಕರಗೌಡ ಸಿದರಡ್ಡಿ, ಎಂ.ಜಿ.ಬಿರಾದಾರ, ಜಿ.ಎನ್.ರೆಡ್ಡಿ, ಎಸ್.ಎನ್.ಕುಲಕರ್ಣಿ, ಸುರೇಶ ಕಿರಿಶ್ಯಾಳ, ಬಾಬು ಮುಲ್ಲಾ, ಕೂಡ್ಲೆಪ್ಪ ಹಿರೇಗೌಡರ, ಸಾವಿತ್ರಿ ವಗ್ಗರ, ಶ್ರೀದೇವಿ ಬಾಗೇವಾಡಿ, ಸಂಗಣ್ಣ ಭೋವಿ, ವೀರೇಶ ವಾಲಿಕಾರ, ಸಿದ್ರಾಯ ಬಿರಾದಾರ ಇತರರಿದ್ದರು.

ರುದ್ರು ರಾಮೋಡಗಿ ಸ್ವಾಗತಿಸಿದರು. ಶಿಕ್ಷಕ ಎಂ.ಎಚ್.ಭೋವಿ ನಿರೂಪಿಸಿದರು. ಸಂಗಮೇಶ್ವರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎ.ಬಿ.ಬಾಗೇವಾಡಿ ವಂದಿಸಿದರು.